ರಿಯಾದ್: ಹಜ್ ಗೆ ಮುಂಚಿತವಾಗಿ ಮಕ್ಕಾದಲ್ಲಿನ 18 ಆಸ್ಪತ್ರೆಗಳು ಮತ್ತು 126 ಆರೋಗ್ಯ ಕೇಂದ್ರಗಳು ಸಿದ್ಧಗೊಂಡಿದೆ. ಇದಲ್ಲದೇ 150 ಆಂಬ್ಯುಲೆನ್ಸ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಹರಂ ನಲ್ಲಿ ತಮ್ಮ ವಸತಿಗೆ ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡಲು ಜಿಪಿಎಸ್ ಸೇರಿದಂತೆ ವ್ಯವಸ್ಥೆಗಳನ್ನೂ ಸಿದ್ಧಪಡಿಸಲಾಗಿದೆ.
ಅರಫಾ, ಮಿನಾ ಮತ್ತು ಮುಝ್ದಲಿಫಾದಲ್ಲಿ ಹಜ್ ಯಾತ್ರಾರ್ಥಿಗಳಿಗಾಗಿ 18 ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳಗಳಲ್ಲಿ 126 ಆರೋಗ್ಯ ಕೇಂದ್ರಗಳು ಇರಲಿದೆ. ಇವುಗಳಲ್ಲಿ ಹೆಚ್ಚಿನವು ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ. 150 ಆಂಬ್ಯುಲೆನ್ಸ್‌ಗಳನ್ನು ಇಡೀ ದಿನದ ಸೇವೆಗೆ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಈ ಬಾರಿ ಏರ್ ಲಿಫ್ಟಿಂಗ್ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಈ ವ್ಯವಸ್ಥೆಗಳು ಹಜ್ ಚಟುವಟಿಕೆಗಳನ್ನು ಸುಗಮಗೊಳಿಸುವ ಭಾಗವಾಗಿದೆ.ಇವು ಆರೋಗ್ಯ ಸಚಿವಾಲಯದ ಮೇಲ್ವಿಚಾರಣೆಯಲ್ಲಿವೆ. ದಾರಿ ತಪ್ಪದೆ ಮಸೀದಿಗೆ ಬಂದು ಹಿಂತಿರುಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಜಿಪಿಎಸ್, ಕ್ಯೂಆರ್ ಕೋಡ್, ಮಾರ್ಗದರ್ಶನ ವ್ಯವಸ್ಥೆ ಮತ್ತು ಸಂವಾದಾತ್ಮಕ ನಕ್ಷೆಗಳಂತಹ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಯಾತ್ರಾರ್ಥಿಗಳಿಗಾಗಿ ಮಕಾನಿ ಎಂಬ ಮೊಬೈಲ್ ಅಪ್ಲಿಕೇಶನನ್ನು ಸಿದ್ಧಪಡಿಸಲಾಗಿದೆ.