ದಮಾಮ್: ಸಂದರ್ಶಕ ವೀಸಾದಲ್ಲಿ ಸೌದಿ ಅರೇಬಿಯಾಕೆ ಆಗಮಿಸಿದವರು ನಿಗದಿತ ಸಮಯದೊಳಗೆ ದೇಶ ತೊರೆಯದಿದ್ದಲ್ಲಿ ವೀಸಾ ನೀಡಿದಾತನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಭದ್ರತಾ ವಿಭಾಗ ಎಚ್ಚರಿಸಿದೆ.
ವೀಸಾ ನೀಡಿದವನು ವಿದೇಶಿಯಾಗಿದ್ದರೆ 6 ತಿಂಗಳ ಜೈಲು ಶಿಕ್ಷೆ ಮತ್ತು 50,000 ರಿಯಾಲ್ ದಂಡ ಮತ್ತು ಗಡಿಪಾರು.ಎಲ್ಲಾ ರೀತಿಯ ಸಂದರ್ಶಕ ವೀಸಾಗಳಿಗೆ ಈ ಕಾನೂನು ಅನ್ವಯಿಸುತ್ತದೆ.
ಅದೇ ರೀತಿ, ಸಂದರ್ಶಕರ ವೀಸಾದಲ್ಲಿ ದೇಶದಲ್ಲಿ ತಂಗಿರುವವರಿಗೆ ಹಜ್ ಮಾಡಲು ಅವಕಾಶವಿಲ್ಲ. ಅಕ್ರಮವಾಗಿ ಹಜ್ ಯಾತ್ರೆಗೆ ಯತ್ನಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಹತ್ತು ಸಾವಿರ ರಿಯಾಲ್ ದಂಡ ವಿಧಿಸಲಾಗುತ್ತದೆ ಮತ್ತು ಗಡಿಪಾರು ಮಾಡಲಾಗುತ್ತದೆ.
ಮೇ 23 ರಿಂದ ಜೂನ್ 21 ರವರೆಗೆ, ಎಲ್ಲಾ ರೀತಿಯ ಸಂದರ್ಶಕ ವೀಸಾ ಹೊಂದಿರುವವರಿಗೆ ಮಕ್ಕಾ ಪ್ರವೇಶ ಮತ್ತು ವಾಸ್ತವ್ಯವನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು, ಕಾನೂನು ಉಲ್ಲಂಘಿಸುವವರ ಬಗ್ಗೆ ಸಾರ್ವಜನಿಕ ಸುರಕ್ಷತಾ ಇಲಾಖೆಯ ಟೋಲ್-ಫ್ರೀ ಸಂಖ್ಯೆ 911 ಮತ್ತು 999 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.