ಲಂಡನ್ | ಸಿಂಗಾಪುರ್ ಏರ್‌ಲೈನ್ಸ್ ಬೋಯಿಂಗ್ 777 ಆಕಾಶದಲ್ಲಿ ದರಂತಕ್ಕೊಳಗಾಗಿದೆ. ಲಂಡನ್-ಸಿಂಗಪುರ ವಿಮಾನವು ಆಕಾಶ ಸುಳಿಗೆ ತುತ್ತಾಗಿದ್ದು, ಅಪಘಾತದಲ್ಲಿ 73 ವರ್ಷದ ಬ್ರಿಟಿಷ್ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 30 ಪ್ರಯಾಣಿಕರು ಗಾಯಗೊಂಡಿದ್ದಾರೆ.
ವಿಮಾನದಲ್ಲಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ವಿಮಾನವು 37,000 ಅಡಿಯಿಂದ 31,000 ಅಡಿಗಳಿಗೆ ಏಕಾಏಕಿ ಕುಸಿದಿದೆ. ಲಂಡನ್‌ನ ಹೀಬ್ರೂ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಿಂಗಾಪುರ ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಟ್ಟ ವಾತಾವರಣದ ಕಾರಣದಿಂದ ವಿಮಾನವು ತೀವ್ರ ಅಲುಗಾಟಕ್ಕೆ (ಪ್ರಕ್ಷುಬ್ಧತೆ-Turbulence) ಒಳಗಾಗಿದೆ. ದಾರಿ ಮಧ್ಯೆ ಒಮ್ಮೆಲೆ ಅಲುಗಾಡಲು ಶುರುವಾಯಿತು. ಬರುಬರುತ್ತ ವಿಮಾನದಲ್ಲಿ ಪ್ರಕ್ಷುಬ್ಧತೆ ಜಾಸ್ತಿಯಾಗಿ ಮಧ್ಯಾಹ್ನ 3.45ರ ಹೊತ್ತಿಗೆ ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತುಭೂಸ್ಪರ್ಶ ಮಾಡಲಾಗಿದೆ.
ಬ್ಯಾಂಕಾಕ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದ್ದರಿಂದ ಥಾಯ್ ವಲಸೆ ಪೊಲೀಸರು ಅಲ್ಲಿ ಎಲ್ಲ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ವೈದ್ಯಕೀಯ ಸಿಬ್ಬಂದಿಯೂ ಹಾಜರಿದ್ದು ಅಗತ್ಯ ಸೇವೆ ಒದಗಿಸಿದ್ದಾರೆ. 18 ಮಂದಿಯನ್ನು ಒಂದು ಆಸ್ಪತ್ರೆಗೆ ಕಳಿಸಲಾಗಿದೆ.. 12 ಜನರಿಗೆ ಇನ್ನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ಒಟ್ಟಾರೆ ಗಾಯಗೊಂಡವರು ಎಷ್ಟು ಮಂದಿ ಎಂದೂ ತಿಳಿದುಬಂದಿಲ್ಲ. ಹಾಗೇ ಮೃತಪಟ್ಟ ಪ್ರಯಾಣಿಕನ ಹೆಸರೂ ದೃಢಪಟ್ಟಿಲ್ಲ. ಆದರೆ ಅವರು 73 ವರ್ಷದವರಾಗಿದ್ದು, ಬ್ರಿಟಿಷ್ ಪ್ರಜೆ ಎನ್ನಲಾಗಿದೆ. ‘ಬ್ಯಾಂಕಾಕ್‌ನಲ್ಲಿ ವಿಮಾನ ಇಳಿದ ಬಳಿಕ ಎಲ್ಲ ಪ್ರಯಾಣಿಕರಿಗೂ ಆದ್ಯತೆಯ ಮೇರೆಗೆ ಅಗತ್ಯ ನೆರವು ಒದಗಿಸಲಾಗಿದೆ. ಥೈಲ್ಯಾಂಡ್‌ನ ಸ್ಥಳೀಯ ಅಧಿಕಾರಿಗಳು, ಪೊಲೀಸರೊಂದಿಗೆ ಸಂಪರ್ಕದಲ್ಲಿ ಇದ್ದೇವೆ. ಸಿಂಗಾಪುರದಿಂದ ಕೂಡ ಒಂದು ವೈದ್ಯಕೀಯ ತಂಡವನ್ನ ಅಲ್ಲಿಗೆ ಕಳಿಸಿಕೊಡಲಾಗಿದೆ’ ಎಂದೂ ಸಿಂಗಾಪುರ ಏರ್‌ಲೈನ್ಸ್ ಹೇಳಿದೆ.