janadhvani

Kannada Online News Paper

ಆಲಂಪಾಡಿಯಲ್ಲಿ SჄS ಸಜಿಪ ಸರ್ಕಲ್ ವಾರ್ಷಿಕ ಕೌನ್ಸಿಲ್

ಸಜಿಪ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SჄS) ಸಜಿಪ
ಸರ್ಕಲ್ ಇದರ ವಾರ್ಷಿಕ ಕೌನ್ಸಿಲ್ ಆಲಂಪಾಡಿ ಅಕ್ಬರಲಿ ಮದನಿಯವರ ನಿವಾಸದಲ್ಲಿ ಇತ್ತೀಚೆಗೆ ಅಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದ ಸಭೆಯನ್ನು SჄS ಬಂಟ್ವಾಳ ಝೋನ್ ಪ್ರಧಾನ ಕಾರ್ಯದರ್ಶಿ ಕೆ.ಪಿ ಅಬ್ದುಲ್ಲಾ ಕೊಳಕೆ ಉದ್ಘಾಟಿಸಿದರು.

KMJ ಸಜಿಪ ಸರ್ಕಲ್ ಅಧ್ಯಕ್ಷರಾದ ಮೋನಾಕ ಕೊಳಕೆ ಶುಭ ಹಾರೈಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ವಾಚಿಸಿದ ವರದಿ ಹಾಗೂ ಕೋಶಾಧಿಕಾರಿ ಇಕ್ಬಾಲ್ ಗೋಳಿಪಡ್ಪು ಮಂಡಿಸಿದ ಲೆಕ್ಕಪತ್ರವನ್ನು ಸಭೆ ಅಂಗೀಕರಿಸಲಾಯಿತು. ಕೌನ್ಸಿಲ್ ವೀಕ್ಷಣೆಗೆ ಝೋನ್ ಸಮಿತಿಯಿಂದ ಆಗಮಿಸಿದ ಕೆಪಿ ಅಬ್ದುಲ್ಲಾ ಇವರ ನೇತೃತ್ವದಲ್ಲಿ ಒಂದೆರಡು ಬದಲಾವಣೆಯೊಂದಿಗೆ ಹಳೇ ಸಮಿತಿಯನ್ನೇ ಮುಂದುವರಿಸಲಾಯಿತು.

ಅಧ್ಯಕ್ಷರಾಗಿ ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ, ಕೋಶಾಧಿಕಾರಿಯಾಗಿ ಎಸ್ ಎಂ ಇಕ್ಬಾಲ್ ಗೋಳಿಪಡ್ಪು, ಉಪಾಧ್ಯಕ್ಷರುಗಳಾಗಿ ಅಲ್ತಾಫ್ ಕೊಳಕೆ ಹಾಗೂ ಇಸ್ಮಾಯಿಲ್ ಚಟ್ಟೆಕ್ಕಲ್ ಕಾರ್ಯದರ್ಶಿಯಾಗಿ ದಹ್ವಾ ವಿಭಾಗ ಉಸ್ಮಾನ್ ಸಖಾಫಿ ಸಜಿಪ, ಕಾರ್ಯದರ್ಶಿಯಾಗಿ ಸಾಂತ್ವನ ವಿಭಾಗ ನಿಝಾರ್ ಕೊಳಕೆ ಇಸಾಬ ಕಾರ್ಯದರ್ಶಿಯಾಗಿ ಝುಬೈರ್ ಕೊಳಕೆ,ಸದಸ್ಯರುಗಳಾಗಿ ಅಬ್ದುಲ್ಲಾ ಕೊಳಕೆ,ಮುಹಮ್ಮದ್ ಹಾರಿಸ್ ಚಟ್ಟೆಕ್ಕಲ್,ಇಕ್ಬಾಲ್ ಮದನಿ ಚಟ್ಟೆಕ್ಕಲ್, ಮುಹಮ್ಮದ್ ಹನೀಫ್ ಬದವಿ ಗೊಳಿಪಡ್ಪು, ಅಬ್ದುಲ್ ಹಮೀದ್ ಕೊಳಕೆ,ಮುಹಮ್ಮದ್ ಹನೀಫ್ ಸಜಿಪ, ಮುಹಮ್ಮದ್ ಮುಸ್ತಫಾ ಸುಭಾಷ್ ನಗರ, ಹಂಝ ಕೊಳಕೆ,ಅಬ್ದುಲ್ ಜಲೀಲ್ ಗೋಳಿಪಡ್ಪು,ಅಬ್ದುಲ್ ಜಲೀಲ್ ಸುಭಾಷ್ ನಗರ, ಇಕ್ಬಾಲ್ ತಲೆಮೊಗರು, ಮುಹಮ್ಮದ್ ಹಾರಿಸ್ ಆಲಂಪಾಡಿ, ಮುಹಮ್ಮದ್ ಶರೀಫ್ ಗೋಳಿಪಡ್ಪು ಉಮರುಲ್ ಫಾರೂಕ್ ಚಟ್ಟೆಕ್ಕಲ್ ಹಾಗೂ ಮುಹಿಯುದ್ದೀನ್ ಕೊಳಕೆ ಇವರನ್ನು ಆಯ್ಕೆ ಮಾಡಲಾಯಿತು.

ಪ್ರ.ಕಾರ್ಯದರ್ಶಿಯ ದನ್ಯವಾದದೊಂದಿಗೆ ಸಭೆ ಮುಕ್ತಾಯ.

error: Content is protected !! Not allowed copy content from janadhvani.com