ಪುತ್ತೂರು : ಸುನ್ನಿ ಆದರ್ಶದ ಧೀರ ನಾಯಕ ಟಿ ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಇದರ ಎಂಟನೇ ವಾರ್ಷಿಕ ಹಾಗೂ ಮೂರನೇ ಸನದುದಾನ ಮಹಾ ಸಮ್ಮೇಳನವು 2024 ಮೇ 16, 17, 18 ದಿನಾಂಕಗಳಲ್ಲಿ ನಚ್ಚಬೆಟ್ಟುವಿನಲ್ಲಿ ನಡಯಲಿದೆ.
16 ರಂದು ಬೆಳಿಗ್ಗೆ ಮರ್ಹೂಂ ಸಯ್ಯಿದ್ ಸಾದಾತ್ ತಂಙಳ್ ರವರ ಕಬರ್ ಹಾಗೂ ನಚ್ಚಬೆಟ್ಟು ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವು ಮಗರಿಬ್ ಬಳಿಕ ಬೃಹತ್ ದಿಖ್ರ್ ಹಲ್ಕಾ ಮಜ್ಲಿಸ್ ನಡೆಯಲಿದೆ. ಅಸ್ಸೆಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು ನೇತೃತ್ವ ವಹಿಸಲಿದ್ದು, ಖ್ಯಾತ ಪ್ರಭಾಷಣಗಾರ ಅಬ್ದುಲ್ ಹಮೀದ್ ಫೈಝಿ ಉದ್ಭೋದನೆ ನೀಡಲಿದ್ದಾರೆ.
17 ರಂದು ಮಗರಿಬ್ ನಮಾಝ್ ಬಳಿಕ ಅಸ್ಸೆಯ್ಯಿದ್ ತ್ವಾಹಾ ತಂಙಳ್ ಹಾಗೂ ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದ್ದು, ಅಸ್ಸೆಯ್ಯಿದ್ ಮುಡೀಸ್ ತಂಙಳ್ ಚೇಲಕ್ಕರೆ ತೃಶೂರ್ ರವರು ವಿಶೇಷ ದುಆಗೆ ನೇತೃತ್ವ ನೀಡಲಿದ್ದಾರೆ.
18 ರಂದು ಶನಿವಾರ ಬೆಳಿಗ್ಗೆ 10ಕ್ಕೆ ಫುರ್ಖಾನಿ ಸಂಗಮ ಹಾಗೂ ಪದವಿ ವಸ್ತ್ರ ವಿತರಣೆ ನಡೆಯಲಿದ್ದು, ಅಸ್ಸೆಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟು ಹಾಗೂ ಅಸ್ಸೆಯ್ಯಿದ್ ಸ್ವಲಾಹುದ್ದೀನ್ ಜಮಲುಲೈಲಿ ಅಲ್ ಅದನಿ ಪರ್ಮುಗಂ ನೇತೃತ್ವ ನೀಡಲಿದ್ದಾರೆ. ಅಂದು ಸಂಜೆ 4.30ಕ್ಕೆ ಗಲ್ಫ್ ಮೀಟ್ ನಡೆಯಲಿದ್ದು, ಸಂಸ್ಥೆಯ ಸಾರಥಿ ಟಿ. ಎಂ. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಾವುಲ್ಲಾ ಸಖಾಫಿ ಅಲ್ ಹಿಮಮಿರವರು ವಿಷಯ ಮಂಡಿಸಲಿದ್ದಾರೆ.
ಮಗರಿಬ್ ಬಳಿಕ ನಡೆಯುವ ಸನದುದಾನ ಮಹಾಸಮ್ಮೇಳದ ಅಧ್ಯಕ್ಷತೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದರು ವಹಿಸಲಿದ್ದು, ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರಾರವರು ದುಆ ನಡೆಸಲಿದ್ದಾರೆ. ಅಸ್ಸೆಯ್ಯಿದ್ ಕೆ. ಎಸ್. ಆಟಕೋಯ ತಂಙಳ್ ಕುಂಬೋಳ್ ರವರು ಸಮ್ಮೇನವನ್ನು ಉದ್ಘಟಿಸಲಿದ್ದು, ಸಮ್ಮೇಳನದ ಕೇಂದ್ರ ಬಿಂದು ಅಸ್ಸೆಯ್ಯಿದ್ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಕಡಲುಂಡಿ ಸನದುದಾನ ಮಾಡಲಿದ್ದಾರೆ. ಅಸ್ಸೆಯ್ಯಿದ್ ನೂರುಸ್ಸಾದಾತ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಸನದುದಾನ ಭಾಷಣಗೈಯ್ಯಲಿದ್ದು, ಅಸ್ಸೆಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ತಂಙಳ್ ಕೂರಿಕ್ಕುಝಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಸಮ್ಮೇಳನದಲ್ಲಿ ಅಸ್ಸೆಯ್ಯಿದ್ ಅಬ್ದುರ್ರಹ್ಮಾನ್ ಬಾಅಲವಿ ಸಾದಾತ್ ತಂಙಳ್ ಗುರುವಾಯನಕೆರೆ, ಕೆ. ಪಿ. ಹುಸೈನ್ ಸಅದಿ ಕೆ ಸಿ ರೋಡ್ ಸಹಿತ ಪ್ರಮುಖ ಸಾದಾತರು, ಉಲಮಾ, ಉಮರಾ ನೇತಾರರು, ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ.
ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟವಿನಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಕ್ರಮ ಹಾಗೂ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಾದ್ಯಂತ ಬರುವ ಎಲ್ಲಾ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ವಿಜಯಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ಕರೆ ನೀಡಿದ್ದಾರೆ.
ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ)
15.05.2024