ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಬೆಳ್ಳಿ ಹಬ್ಬದ ಉದ್ಘಾಟನೆ ಮತ್ತು ಶರೀಅತ್ ವಿಭಾಗದಲ್ಲಿ ಕಲಿತ 240 ವಿದ್ಯಾರ್ಥಿನಿಯರಿಗೆ ಅಲ್ ಮಾಹಿರಾ ಪದವಿ ಪ್ರದಾನ ಸಮಾವೇಶ 2024 ಮೇ 16 ಗುರುವಾರದಂದು ಕುಂಬ್ರ ಮರ್ಕಝ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಬೆಳಿಗ್ಗೆ 9 ರಿಂದ ಮದ್ಯ್ಯಾಹ್ನ 1ರ ತನಕ ಮಹಿಳಾ ಸಮಾವೇಶ ನಡೆಯಲಿದ್ದು, ಅಪರಾಹ್ನ 4 ರಿಂದ 6 ರ ತನಕ ಕೇರಳದ ಖ್ಯಾತ ಬುರ್ದಾ ಗಾಯಕ ಡಾಕ್ಟರ್ ಕೋಯಾ ಕಾಪಾಡ್ ಬಳಗದಿಂದ “ಖವಾಲಿ ಸಂಜೆ” ಕಾರ್ಯಕ್ರಮ ನಡೆಯಲಿದೆ.
ಮಗ್ರಿಬ್ ನಮಾಜ್ ಬಳಿಕ ನಡೆಯುವ ಸಮಾರೋಪ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಾಗಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಆಗಮಿಸಲಿದ್ದು, ಅಲ್ಲದೇ ಸಾದಾತರು, ವಿದ್ವಾಂಸರು, ಸಾಮಾಜಿಕ, ಶೈಕ್ಷಣಿಕ ಚಿಂತಕರು ಭಾಗವಹಿಸಲಿದ್ದಾರೆ.
ಆದ್ದರಿಂದ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಾದ್ಯಂತ ಬರುವ ಎಲ್ಲಾ ಸುನ್ನಿ ಸಂಘಟನಾ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿರವರು ಕರೆ ನೀಡಿದ್ದಾರೆಂದು ಯೂಸುಫ್ ಸಯೀದ್ ಪುತ್ತೂರು
(ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.