janadhvani

Kannada Online News Paper

ತಿರುವನಂತಪುರಂ-ಮಂಗಳೂರು ವಂದೇ ಭಾರತ್ ರೈಲು: ವೇಳಾಪಟ್ಟಿ ಪರಿಷ್ಕರಣೆ

ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮ್ಯಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ತಿರುವನಂತಪುರಂನಿಂದ ಸಂಜೆ 4.05ಕ್ಕೆ ಹೊರಡುವ ರೈಲು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ.

ಮಂಗಳೂರು, ಮೇ 11:ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಇದು ಮೇ 13ರಿಂದ ಜಾರಿಗೆ ಬರಲಿರುವುದಾಗಿ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ರೈಲು ನಂಬರ್ 20632 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ರೈಲು ಮೇ 13ರಿಂದ ಬದಲಾದ ವೇಳಾಪಟ್ಟಿ ಅನ್ವಯ ಸಂಚಾರ ನಡೆಸಲಿದೆ. ಪ್ರಯಾಣಿಕರು ಪರಿಷ್ಕತ ಸಮಯ ತಿಳಿಯುವಂತೆ ಮನವಿ ಮಾಡಲಾಗಿದೆ.

ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರ್ನಾಕುಲಂ ಜಂಕ್ಷನ್, ತ್ರಿಶೂರ್, ಶೋರ್ನೂರ್ ಜಂಕ್ಷನ್, ತಿರೂರ್, ಕೊಯಿಕ್ಕೋಡ್, ಕಣ್ಣೂರು, ಕಾಸರಗೋಡು ಮೂಲಕ ಸಂಚಾರ ನಡೆಸುತ್ತದೆ.

ಬದಲಾದ ವೇಳಾಪಟ್ಟಿ:

ಪರಿಷ್ಕೃತ ವೇಳಾಪಟ್ಟಿಯಂತೆ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ವಂದೇ ಭಾರತ್ ರೈಲು 19.56/19.58 ಎರ್ನಾಕುಲಂ ಜಂಕ್ಷನ್, 19.56/ 19.58 ತ್ರಿಶೂರ್, 20.30/ 20.32 ಶೋರ್ನೂರ್ ಜಂಕ್ಷನ್, 21.02/21.04 ತಿರೂರ್, 21.32/ 21.34 ಕೊಯಿಕ್ಕೋಡ್, 22.36/ 22.38 ಕಣ್ಣೂರು, 23.46/ 23.48 ಕಾಸರಗೋಡು ಆಗಮನ/ ನಿರ್ಗಮನವಾಗಲಿದೆ.

ಈಗ ರೈಲ್ವೆ ಇಲಾಖೆ ಮೇ 13ರಿಂದ ಜಾರಿಗೆ ಬರುವಂತೆ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ನಿಂದ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿಲ್ಲ. ತಿರುವನಂತಪುರಂ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಿದೆ.

ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮ್ಯಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ತಿರುವನಂತಪುರಂನಿಂದ ಸಂಜೆ 4.05ಕ್ಕೆ ಹೊರಡುವ ರೈಲು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಎಲ್ಲಾ ದಿನ ರೈಲು ಸಂಚಾರ ನಡೆಸುತ್ತದೆ.

ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉಳಿದ ಯಾವುದೇ ಸಮಯ, ದರ, ಬೋಗಿಗಳ ಸಂಯೋಜನೆ, ನಿಲ್ದಾಣದಲ್ಲಿ ಬದಲಾವಣೆ ಇಲ್ಲ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ಸ್ಪಷ್ಟಪಡಿಸಿದೆ.

ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಚಾಲನೆ ನೀಡಿದ್ದರು. ಕಾಸರಗೋಡು-ತಿರುವನಂತಪುರಂ ನಡುವೆ ಸಂಚಾರ ನಡೆಸುತ್ತಿದ್ದ ರೈಲನ್ನು ಕರ್ನಾಟಕ ಕರಾವಳಿಯ ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆ ಮಾಡಲಾಗಿತ್ತು.

ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ ನಡುವೆ ರೈಲು ನಂಬರ್ 20362 ಮತ್ತು ತಿರುವನಂತಪುರಂ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವೆ 20632 ನಂಬರ್ ರೈಲು ಸಂಚಾರ ನಡೆಸುತ್ತಿದೆ.

ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲುಗಳ ಸಂಪರ್ಕವಿದೆ. ಮಂಗಳೂರು ಮತ್ತು ಮಡಗಾಂವ್ ನಡುವೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ರೈಲು ಸೇವೆ ಆರಂಭಿಸಲಾಗಿದೆ.

error: Content is protected !! Not allowed copy content from janadhvani.com