ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನೋರ್ತ್ ಝೋನ್ ವತಿಯಿಂದ ಕೆಸಿಎಫ್ ನ ಹತ್ತನೇ ವಾರ್ಷಿಕದ ಡಿಸೇನಿಯಂ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಇತ್ತೀಚೆಗೆ ದುಬೈಯಲ್ಲಿ ನಡೆಯಿತು. ದುಬೈಯಲ್ಲಿರುವ ಪ್ರಮುಖ ಉದ್ಯಮಿ ಜನಾಬ್ ಅಬ್ದುಲ್ ರಝಾಕ್ ಹಾಜಿ DEWA ರವರು ಬಿಡುಗಡೆ ಗೊಳಿಸಿದರು.
ದುಬೈ ನೋರ್ತ್ ಝೋನ್ ಅಧೀನದ ಅಲ್ ಮುರಾರ್ ಸೆಕ್ಟರ್ ವತಿಯಿಂದ ದುಬೈ ದೇರಾ ಬನಿಯಾಸ್ ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಸೆಕ್ಟರ್ ಸಮ್ಮೇಳನ ಕಾರ್ಯಕ್ರಮ ನಡೆಸಲಾಯಿತು.
ಸೆಕ್ಟರ್ ಸಮ್ಮೇಳನದ ಸ್ವಾಗತ ಸಮಿತಿ ಚೈರ್ಮ್ಯಾನ್ ಮುಶ್ತಾಕ್ ಉಡುಪಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದುಬೈ ನೋರ್ತ್ ಝೋನ್ ಶಿಕ್ಷಣ ವಿಭಾಗ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆಯವರು ಉದ್ಘಾಟನೆ ಮಾಡಿದರು.
ಮುಖ್ಯ ಪ್ರಭಾಷಣವನ್ನು ಮರ್ಕಝ್ ತ್ವಯ್ಬಾ ಅಕಾಡಮಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಈದ್ ಅಬ್ದುಲ್ ಕರೀಂ ನೂರಾನಿ ಮಾಡಿದರು. ತಮ್ಮ ಭಾಷಣದಲ್ಲಿ ಇಹಪರ ವಿಜಯಕ್ಕೆ KCF ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯಾಚರಿಸಬೇಕೆಂದು ಹಿತವಚನ ನೀಡಿದರು.
ಸಯ್ಯಿದ್ ತ್ವಾಹಾ ತಂಙಳ್ ಸಯ್ಯಿದ್ ಶಿಹಾಬ್ ತಂಙಳ್ ಕಿನ್ಯ, ಮೂಸಾ ಹಾಜಿ ಬಸರ, ಇಸ್ಮಾಯಿಲ್ ಮದನಿ ನಗರ ಅಬೂಸ್ವಾಲಿಹ್ ಸಖಾಫಿ,ಇನೋಳಿ ಶುಕೂರ್ ಮನಿಲ, ಅಬ್ದುಲ್ ರಹಿಂ ಕೋಡಿ, ನಿಯಾಝ್ ಬಸರ, ಮುಂತಾದವರು ಉಪಸ್ಥಿತರಿದ್ದರು.
ಸ್ವಾಗತ ಸಮೀತಿ ಕನ್ವೀನರ್ ಫೈಝಲ್ ಬೆಳ್ತಂಗಡಿ ಸ್ವಾಗತಿಸಿ ಅಶ್ರಫ್ ಮದನಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ಧನ್ಯವಾದ ಸಲ್ಲಿಸಿದರು.