ರಿಯಾದ್: ಸೌದಿ ಅರೇಬಿಯಾಕ್ಕೆ ವಿವಿಧ ರೀತಿಯ ವೀಸಾಗಳ ಸೇವೆಗಳನ್ನು ಒದಗಿಸಲು, ಈ ವರ್ಷದ ಅಂತ್ಯದ ವೇಳೆಗೆ 110 ದೇಶಗಳಲ್ಲಿ 200 ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ಪ್ರಸ್ತುತ 45ಕ್ಕೂ ಹೆಚ್ಚು ದೇಶಗಳಲ್ಲಿ 190ಕ್ಕೂ ಹೆಚ್ಚು ಕೇಂದ್ರಗಳಿವೆ.
ಇದಲ್ಲದೆ, 110 ದೇಶಗಳಲ್ಲಿ 200 ಕ್ಕೂ ಹೆಚ್ಚು ವೀಸಾ ಸೇವಾ ಕೇಂದ್ರಗಳು ಪ್ರಾರಂಭವಾಗುತ್ತಿವೆ ಎಂದು ಸೌದಿ ಸಾರ್ವಜನಿಕ ಹೂಡಿಕೆ ನಿಧಿಯ ಸಂಪೂರ್ಣ ಒಡೆತನದ ಸೌದಿ ಕಂಪನಿ ಫಾರ್ ವೀಸಾ ಮತ್ತು ಟ್ರಾವೆಲ್ ಸೊಲ್ಯೂಷನ್ಸ್ (ತಅ್ ಶೀರ್) ಸಿಇಒ ಫಹದ್ ಅಲ್ ಅಮೌದ್ ಹೇಳಿದರು. ಮದೀನಾದಲ್ಲಿ ಉಮ್ರಾ ಮತ್ತು ಝಿಯಾರಾ ಫೋರಂನಲ್ಲಿ ಭಾಗವಹಿಸಿದ್ದ ಅವರು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.
ಉದ್ಯೋಗ, ಪ್ರವಾಸೋದ್ಯಮ, ತೀರ್ಥಯಾತ್ರೆ, ಅಧ್ಯಯನ, ಭೇಟಿ, ವ್ಯಾಪಾರ ಮುಂತಾದ ಯಾವುದೇ ಉದ್ದೇಶಕ್ಕಾಗಿ ವೀಸಾಗಳ ಸೇವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಶ್ವದಾದ್ಯಂತ ವೀಸಾ ಸೇವಾ ಕೇಂದ್ರಗಳನ್ನು ತೆರೆಯಲು ಸರ್ಕಾರವು ಈ ಹಿಂದೆ ನಿರ್ಧರಿಸಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದ ವ್ಯವಸ್ಥೆಯಾಗಿದೆ ‘ತಅ್ ಶೀರ್’.