ರಿಯಾದ್: ಸೌದಿ ಅರೇಬಿಯಾ ಟ್ರಾಫಿಕ್ ದಂಡದಲ್ಲಿ ಭಾರಿ ಕಡಿತವನ್ನು ಘೋಷಿಸಲಾಗಿದೆ. ಈ ವರ್ಷ ಏಪ್ರಿಲ್ 18ರವರೆಗಿನ ದಂಡಕ್ಕೆ ಶೇ.50 ಮತ್ತು ಆ ನಂತರ ದಾಖಲಾದ ದಂಡಕ್ಕೆ ಶೇ.25 ರಿಯಾಯ್ತಿ ನೀಡಲಾಗುವುದು.
ದೊರೆ ಸಲ್ಮಾನ್ ಮತ್ತು ಕ್ರೌನ್ ಪ್ರಿನ್ಸ್ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆದೇಶದ ಮೇರೆಗೆ ಆಂತರಿಕ ಸಚಿವಾಲಯವು ಸಡಿಲಿಕೆಗಳನ್ನು ಘೋಷಿಸಿದೆ. ಹಣಕಾಸು ಸಚಿವಾಲಯ ಮತ್ತು ಸೌದಿ ಡೇಟಾ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥಾರಿಟಿಯ ಸಹಾಯದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಬಾಕಿ ಉಳಿದಿರುವ ಎಲ್ಲಾ ದಂಡಗಳನ್ನು ಆರು ತಿಂಗಳೊಳಗೆ ಪಾವತಿಸಬೇಕು.
ಪ್ರತಿ ದಂಡವನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಪಾವತಿಸಬಹುದು. ಅದೇ ಸಮಯದಲ್ಲಿ, ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಪ್ರಕರಣಗಳಲ್ಲಿ ವಿಧಿಸಲಾದ ದಂಡಗಳಿಗೆ ಈ ಪ್ರಯೋಜನವು ಅನ್ವಯಿಸುವುದಿಲ್ಲ. ದಂಡ ಪಾವತಿಸದಿದ್ದಲ್ಲಿ ವಾಹನವನ್ನು ಜಪ್ತಿ ಮಾಡಲು ಹಾಗೂ ಇತರೆ ಕಾನೂನು ಕ್ರಮ ಕೈಗೊಳ್ಳಲು ಸಚಿವಾಲಯ ನಿರ್ಧರಿಸಿದೆ.