ಕರ್ನಾಟಕ ಕಲ್ಚರಲ್ ಫೌಂಡೇಶನ್ನಿನ 10 ನೇ ವಾರ್ಷಿಕ ಮಹಾಸಮ್ಮೇಳನ 19, ಮೇ 2024 ಭಾನುವಾರ ಮಂಗಳೂರಿನಲ್ಲಿ ನಡೆಯಲಿದ್ದು ಯಶಸ್ವಿಗೊಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೆಸಿಎಫ್ ಈಷ್ಟರ್ನ್ ಪ್ರೊವಿನ್ಸ್ ನೂತನ ದಾಯಿ ಪಿ.ಸಿ. ಅಬೂಬಕ್ಕರ್
ಸಅದಿ ಹೇಳಿದರು. ಅವರು, ಕೆಸಿಎಫ್ ಅಲ್ ಖೋಬರ್ ಮಾ.29 ಶುಕ್ರವಾರ ಆಯೋಜಿಸಿದ್ದ ಇಫ್ತಾರ್ ಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಸಿಎಫ್ ಕೊಲ್ಲಿ ರಾಷ್ಟ್ರಗಳಲ್ಲಿ ಉತ್ತಮ ಹಾಗೂ ಅತ್ಯುನ್ನತ ಜನಪರ ಕೆಲಸಗಳನ್ನು ನಡೆಸಿ ಜನಮನ ಗೆದ್ದಿದೆ. ಮುಂದಕ್ಕೆ ಹಮ್ಮಿಕೊಂಡಿರುವ ಹಲವಾರು ಕಾರ್ಯಕ್ರಮಗಳನ್ನು ಅಭಿವೃದ್ಧಿಗೊಳಿಸಲು ನಮ್ಮೊಂದಿಗೆ ಕೈ ಜೋಡಿಸಿರಿ ಎಂದು ಮನವಿ ಮಾಡಿದರು.
ಸೆಕ್ಟರ್ ಅಧ್ಯಕ್ಷ ಝೈನುಲ್ ಆಬಿದೀನ್ ಝುಹ್ರಿ ಉಸ್ತಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಬ್ದುಲ್ ಅಝೀಝ್ ಪವಿತ್ರ ರವರು ಕೆಸಿಎಫ್ ನ ಸಾಂತ್ವನ ಕಾರ್ಯಗಳನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಕೆಸಿಎಫ್ ಐ.ಸಿ. ಸದಸ್ಯ ಎನ್. ಎಸ್. ಅಬ್ದುಲ್ಲಾ ಮಂಜನಾಡಿ, ಉಸ್ಮಾನ್ ಸಅದಿ ನೆಲ್ಯಾಡಿ, ಅಬ್ದುರ್ರಝ್ಝಾಖ್ ಸಖಾಫಿ ಮಚ್ಚಂಪಾಡಿ , ಅಬ್ದುಲ್ಲತೀಫ್ ಮುಸ್ಲಿಯಾರ್ ಸಜಿಪ ಹಾಜರಿದ್ದರು.
ಮುಹಮ್ಮದ್ ಸಅದಿ ದುಆ ಗೈದರು.
ದಮ್ಮಾಂ, ತುಖ್ಬಾ, ಖೋಬರ್ ಕೆಸಿಎಫ್ ಸೆಕ್ಟರ್ ನ ಸದಸ್ಯರು ಹಾಗೂ ಕೆಸಿಎಫ್ ದಮ್ಮಾಂ ಝೋನ್ ಕಾರ್ಯದರ್ಶಿ ತಮೀಂ ಕೂಳೂರು, ಕೋಶಾಧಿಕಾರಿ ಇಬ್ರಾಹೀಂ ವಳವೂರು,ಖೋಬರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಪಕ್ಷಿಕೆರೆ ಮತ್ತು ಅಶ್ರಫ್ ನಾವುಂದ ಭಾಗವಹಿಸಿ ಇಫ್ತಾರ್ ಕೂಟವನ್ನು ಯಶಸ್ವಿಗೊಳಿಸಿದರು.
ಕೆಸಿಎಫ್ ಸಾಂತ್ವನ ಇಲಾಖೆಯ ಝೋನ್ ಮುಖ್ಯಸ್ಥ ಮುಹಮ್ಮದ್ ಮಲೆಬೆಟ್ಟು ಸ್ವಾಗತ, ಧನ್ಯವಾದಗೈದು ಕಾರ್ಯಕ್ರಮ ನಿರೂಪಿಸಿದರು.