ದಮ್ಮಾಂ: ಉತ್ತರ ಕರ್ನಾಟಕದ ಹೂವಿನ ಹಡಗಲಿ, ಗಂಗಾವತಿ , ಬೆಳಗಾವಿ ಹಾಗೂ ಗುಲ್ಬರ್ಗ ಗಳಲ್ಲಿ ಧಾರ್ಮಿಕ ರಂಗದಲ್ಲಿ ದಾಪುಗಾಲು ಹಾಕುತ್ತಿರುವ ಮಸ್ದರ್ ಎಜು ಆಂಡ್ ಚಾರಿಟಿ ಸೌದಿ ಅರೇಬಿಯಾದ ದಮ್ಮಾಂನಲ್ಲಿ ಆಯೋಜಿಸಿದ ಪ್ರಪ್ರಥಮ ಗ್ರ್ಯಾಂಡ್ ಇಫ್ತಾರ್ ಮೀಟ್ ಯಶಸ್ವಿಯಾಗಿದೆ.
ಇಂದು 14, ಮಾರ್ಚ್ 2024 ಗುರುವಾರ ದಮ್ಮಾಂನಲ್ಲಿ ನಡೆದ ಇಫ್ತಾರ್ ಮೀಟ್ ಮಸ್ದರ್ ಜನರಲ್ ಮ್ಯಾನೇಜರ್ ಸಯ್ಯಿದ್ ಯೂಸುಫ್ ನವಾಝ್ ಅಲ್ ಹುಸೈನಿ ರವರ ದುಆ ದೊಂದಿಗೆ ಪ್ರಾರಂಭಿಸಿ ಅಲ್ಲಾಹನ ಪವಿತ್ರ ನಾಮದಿಂದ ಉದ್ಘಾಟಿಸಿದರು. ಮಸ್ದರ್ ದಮ್ಮಾಂ ಘಟಕ ಅಧ್ಯಕ್ಷ ಹಾಜಿ ಅಬ್ದುಸ್ಸತ್ತಾರ್ ಜಯಪುರ ರವರ ಅನುಪಸ್ಥಿತಿಯಲ್ಲಿ ಗೌರವಾಧ್ಯಕ್ಷ ಹಾಜಿ ಅಬೂಬಕ್ಕರ್ ರೈಸ್ಕೋ ಇವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಸ್ದರ್ ರೂವಾರಿ ಹಾಫಿಳ್ ಸುಫ್ಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.
ಸಭಿಕರಿಗೆ ವಿಡಿಯೋ ಚಿತ್ರೀಕರಣ ಮೂಲಕ ಮಸ್ದರ್ ನ ಕಾರ್ಯಕ್ರಮಗಳನ್ನು ಭಿತ್ತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಬ್ಬಾಸ್ ಖಾದ್ರಿ, ಮಸ್ದರ್ ನೂತನ ಓರ್ಗನೈಝರ್ ತಮೀಂ ಇಖ್ಬಾಲ್ ಉಸ್ತಾದ್ ಮಲಾರ್, ಕೆಸಿಎಫ್ ನಾಯಕರಾದ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ದಮ್ಮಾಂ, ಅಬ್ದುಲ್ ಅಝೀಝ್ ಸಅದಿ ಜುಬೈಲ್ ಹಾಜರಿದ್ದರು.
ಡಿಕೆಯಸ್ಸಿ, ಕೆಸಿಎಫ್,ಅಲ್ ಖಾದಿಸ ಕಾವಲ್ಕಟ್ಟೆ, ದಾರುಲ್ ಇರ್ಶಾದ್ ಮಾಣಿ ಅಲ್ ಮದೀನ ಮಂಜನಾಡಿ, ಮದೀನತುಲ್ ಮುನವ್ವರಾ ಮೂಡಡ್ಕ, ಮನ್ಶರ್, ತಾಜುಸ್ಸುನ್ನ ಭಟ್ಕಳ,ಸಅದಿಯ್ಯಾ, ಮುಈನುಸ್ಸುನ್ನ ಹಾವೇರಿ, ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ಮಲೆನಾಡು ಗಲ್ಫ್ ಅಸೋಸಿಯೇಷನ್(ಎಂಜಿಎ) ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.
ಮಸ್ದರ್ ದಮ್ಮಾಂ ಕೋಶಾಧಿಕಾರಿ ಇಸ್ಮಾಯೀಲ್ ಕಾಟಿಪಳ್ಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ನಾವುಂದ ಧನ್ಯವಾದಗೈದರು.