ಮಸ್ಕತ್: ಒಮಾನ್‌ನಲ್ಲಿ ವಾಹನ ಚಲಾಯಿಸುವಾಗ ಸ್ಥಳಗಳ ಲೊಕೇಶನ್ ಅಥವಾ ವಿಳಾಸವನ್ನು ಹುಡುಕಲು ಸಹ ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸುವಂತೆ ರಾಯಲ್ ಒಮಾನ್ ಪೊಲೀಸರು ಕೋರಿದ್ದಾರೆ. ಮೊಬೈಲ್ ಫೋನ್‌ಗಳ ಬಳಕೆ ಮತ್ತು ಅದರಲ್ಲಿನ ಮ್ಯಾಪ್, ಜಿಪಿಎಸ್ ಅಪ್ಲಿಕೇಶನ್‌ಗಳ ಬಳಕೆಯನ್ನೂ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
ವಾಹನದ ಒಳಗೆ ಹೋಲ್ಡರ್‌ನಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಸಹ ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಜಿಪಿಎಸ್ ನ್ಯಾವಿಗೇಷನ್ ಬಳಸುವ ಅಗತ್ಯವಿದ್ದಲ್ಲಿ ಪ್ರಯಾಣ ಆರಂಭಿಸುವ ಮುನ್ನವೇ ಸೆಟ್ ಮಾಡಿಕೊಳ್ಳಬೇಕು ಎನ್ನುತ್ತಾರೆ ರಸ್ತೆ ಸುರಕ್ಷತೆ ಕ್ಷೇತ್ರದ ತಜ್ಞರು.
ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸದಿರುವುದು, ಆನ್‌ಲೈನ್‌ನಲ್ಲಿ ಬ್ರೌಸ್ ಮಾಡದಿರುವುದು, ವೀಡಿಯೊಗಳನ್ನು ವೀಕ್ಷಿಸದಿರುವುದು, ಕರೆಗಳಿಗೆ ಉತ್ತರಿಸದಿರುವುದು, ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯದಿರುವುದು ಮುಂತಾದವುಗಳು ಸುರಕ್ಷಿತ ಚಾಲನೆಗೆ ಅತ್ಯಗತ್ಯ.