ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಮ್ಮಾಮ್ ವಲಯದ 28ನೇ ವಾರ್ಷಿಕ ಮಹಾಸಭೆ 8 ಮಾರ್ಚ್ 2024 ಶುಕ್ರವಾರ ಜುಮಾ ನಮಾಝಿನ ಬಳಿಕ 1 ಗಂಟೆಗೆ ಸರಿಯಾಗಿ ದಮ್ಮಾಂ ನಲ್ಲಿ ಜರಗಿತು.
ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಯವರ ಘನ ಅದ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳರವರ ದುಆದ ಬಳಿಕ ಹಫರ್ ಅಲ್ ಬಾತಿನ್ ಘಟಕದ ಗೌರವಾಧ್ಯಕ್ಷ ರಾದ ಉಸ್ತಾದ್ ನಜೀಮ್ ಮದನಿ ಪೂಂಜಾಲ್ ಕಟ್ಟೆ ಪವಿತ್ರ ಖುರ್ ಆನ್ ನ ಸೂರ: ತೀನ್ ಪಾರಾಯಣ ಗೈದರು.
ದಮ್ಮಾಂ ವಲಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮೂಡುತೋಟ ಸಭೆಗೆ ಆಗಮಿಸಿದ ಹಫರ್ ಅಲ್ ಬಾತಿನ್, ಅಲ್ ಹಸ್ಸ , ಜುಬೈಲ್, ಯೂತ್ ವಿಂಗ್ ಜುಬೈಲ್, ತುಖ್ಬಾ, ಅಲ್ ಖೋಬರ್ ಮತ್ತು ದಮ್ಮಾಂ ಘಟಕಗಳ ಸದಸ್ಯರನ್ನು ಸ್ವಾಗತಿಸಿದರು.
ಹಫರ್ ಅಲ್ ಬಾತಿನ್ ಮಾಜಿ ಅಧ್ಯಕ್ಷ ಸಿರಾಜ್ ಕುಂತೂರು ರವರು
ಅಲ್ಲಾಹನ ಪವಿತ್ರ ನಾಮದೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು.
ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ರವರು ವಾರ್ಷಿಕ ವರದಿ ಹಾಗೂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ವಾರ್ಷಿಕ ಪ್ರವರ್ತನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ದಮ್ಮಾಮ್ ಝೋನ್ ಗೊಳಪಟ್ಟ ಎಲ್ಲಾ ಘಟಕಗಳ ಸಂಭಂಧಪಟ್ಟವರು ತಮ್ಮ ಘಟಕಗಳ ಕಾರ್ಯ ಪ್ರವರ್ತನೆಗಳ ಬಗ್ಗೆ ಮಾತನಾಡಿದರು.
ಹಫರುಲ್ ಬಾತಿನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮಂಜೆ , ಅಲ್ ಹಸ್ಸ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಬೊಳ್ಳಾಯಿ, ಜುಬೈಲ್ ಅಧ್ಯಕ್ಷ ಅಶ್ರಫ್ ನಾಳ, ದಮ್ಮಾಮ್ ಅಧ್ಯಕ್ಷ ಸಯ್ಯದ್ ಬಾವ ಬಜ್ಪೆ , ಅಲ್ ಖೋಬರ್ ಪ್ರಧಾನ ಕಾರ್ಯದರ್ಶಿ ಶಾಫಿ ರಿಝ್ವಾನ್ ಮಂಗಳೂರು, ತುಕ್ಬಾ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ಮತ್ತು ಜುಬೈಲ್ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಫೀರ್ ಗೂಡಿನಬಳಿ ಸಂದರ್ಭೋಚಿತವಾಗಿ ಮಾತನಾಡಿದರು.
ಉಸ್ತುವಾರಿಗಳು ತಮಗೆ ವಹಿಸಿಕೊಟ್ಟ ಘಟಕಗಳ ಉಸ್ತುವಾರಿ ವರದಿಯನ್ನು ತಿಳಿಸಿದರು.
ಹಫರ್ ಅಲ್ ಬಾತಿನ್ ಉಸ್ತುವಾರಿ ಅಬ್ದುಲ್ ಕರೀಂ ಪಾಣೆಮಂಗಳೂರು, ಜುಬೈಲ್ ಘಟಕದ ಉಸ್ತುವಾರಿ ಅಬ್ದುಲ್ ಅಝೀಝ್ ಮೂಡುತೋಟ, ಅಲ್ ಖೋಬರ್ ಘಟಕದ ಉಸ್ತುವಾರಿ ಸಫೀರ್ ಗೂಡಿನಬಳಿ ಮಾತನಾಡಿದರು.
ಘಟಕಗಳಿಗೆ ಮೊಮೆಂಟೊ ಮತ್ತು ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ, ಖಜಾಂಜಿ ಗಳಿಗೆ ಹಾಗೂ ಸದಸ್ಯರಿಗೆ ತಮ್ಮ ಘಟಕಗಳಿಗೆ ಮಾಡಿದ ಪ್ರವರ್ತನೆ ಗಳನ್ನು ಮನಗಂಡು Certificate of Appreciation ಹಾಗೂ ಪ್ರತೀ ಮಾಸಿಕ ಸಭೆಗಳಿಗೆ ಹಾಜರಾದ ಸದಸ್ಯರಿಗೆ ಪರ್ಫೆಕ್ಟ್ ಹಾಜರಾತಿ ಸರ್ಟಿಫಿಕೇಟ್ ನೀಡಲಾಯಿತು.
ಮ್ಯಾನ್ ಆಫ್ ದಿ ಇಯರ್ ಅವಾರ್ಡನ್ನು ಜುಬೈಲ್ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫೀರ್ ಗೂಡಿನಬಳಿಯವರು ತನ್ನದಾಗಿರಿಸಿಕೊಂಡರು.
ಯಶಸ್ವಿ ಫ್ಯಾಮಿಲಿ ಮುಲಾಖಾತ್ 2023 ಸಮಿತಿಗೆ ಮೊಮೆಂಟೊ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಯವರು ಕೆಲವೊಂದು ದೀನೀ ನಸೀಹತ್ ಗಳ ಮೂಲಕ ಯಾವ ರೀತಿ ಅಲ್ಲಾಹನ ಸಂತೃಪ್ತಿ ಗೋಸ್ಕರ ಡಿಕೆಯಸ್ಸಿ ಗಾಗಿ ನಾವು ಪ್ರವರ್ತನೆ ಗೈಯ್ಯಬೇಕು ಅದನ್ನು ಯಾವ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಹಾಗೂ ನನ್ನ ಅಧಿಕಾರವಧಿಯಲ್ಲಿ ತಾವುಗಳು ನನ್ನೊಂದಿಗೆ ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಡಿಕೆಯಸ್ಸಿಗಾಗಿ ಅವಿರತ ಶ್ರಮದಿಂದ ಡಿಕೆಯಸ್ಸಿಗಾಗಿ ದುಡಿದು ಗಲ್ಫ್ ಜೀವನಕ್ಕೆ ವಿದಾಯ ಹಾಕುತ್ತಿರುವ ಅಬ್ದುರ್ರಹ್ಮಾನ್ ಪಾಣಾಜೆಯವರಿಗೆ
ಡಿಕೆಯಸ್ಸಿ ದಮ್ಮಾಂ ವಲಯ ಹಾಗೂ ಹಫರ್ ಅಲ್ ಬಾತಿನ್ ವತಿಯಿಂದ ಶಾಲು ಹಾಗೂ ಮೊಮೆಂಟೋ ನೀಡಿ ಸನ್ಮಾನಿಸಲಾಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಸಂವಹಣಾ ಕಾರ್ಯದರ್ಶಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಯವರ ಉಸ್ತುವಾರಿಯಲ್ಲಿ 2024-25 ನೇ ಸಾಲಿಗೆ ನೂತನ ಸಮಿತಿಯನ್ನು
ರಚಿಸಲಾಯಿತು.
ಗೌರವಾಧ್ಯಕ್ಷ ರಾಗಿ ಯು.ಡಿ. ಅಬ್ದುಲ್ ಹಮೀದ್ ಉಳ್ಳಾಲ
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಕಾಪು, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಹಾಖ್ ಬೊಳ್ಳಾಯಿ, ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಂ ನೆಕ್ಕರೆ ಯವರು ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಮೂಳೂರು, ಅಶ್ರಫ್ ನಾಳ, ಮುಹಮ್ಮದ್ ಅಮ್ಮುಂಜೆ.
ಕಾರ್ಯದರ್ಶಿಗಳಾಗಿ ಸಫೀರ್ ಗೂಡಿನಬಳಿ, ಶಾಫಿ ರಿಝ್ವಾನ್ ಮಂಗಳೂರು, ಶೌಕತ್ ಅಲೀ ತೀರ್ಥಹಳ್ಳಿರವರನ್ನು ಆರಿಸಲಾಯಿತು.
ಸಂಘಟನಾ ಕಾರ್ಯದರ್ಶಿಯಾಗಿ ಪಿ.ಎಚ್. ಇಸ್ಮಾಯೀಲ್ ಉಸ್ತಾದ್, ಕಮ್ಯುನಿಕೇಶನ್ ಸೆಕ್ರೆಟರಿಯಾಗಿ ಜಮಾಲ್ ಕಣ್ಣಂಗಾರ್, ವರದಿಗಾರರಾಗಿ ಇಸ್ಮಾಯೀಲ್ ಕಾಟಿಪಳ್ಳರವರು ನೇಮಕಗೊಂಡರು.
ಉಳಿದ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಗೊಳಿಸಲಾಯಿತು.
ನೂತನ ಸಮಿತಿಗೆ ಯು.ಡಿ. ಅಬ್ದುಲ್ ಹಮೀದ್ ಉಳ್ಳಾಲ ಶುಭ ಹಾರೈಕೆಗೈದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಬ್ದುಲ್ ಹಮೀದ್ ಕಾಪು ರವರು ಮಾತನಾಡುತ್ತಾ ಇನ್ನು ಮುಂದಕ್ಕೂ ಹೆಚ್ಚಿನ ಪ್ರವರ್ತನೆಯನ್ನು ಡಿಕೆಯಸ್ಸಿಗಾಗಿ ಮೀಸಲಿಟ್ಟು ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ನುಡಿದರು.
ಸಮಾರಂಭದ ಕೊನೆಯಲ್ಲಿ ಮುಹಮ್ಮದ್ ಅಲೀ ಮುಝೈನ್ ರವರು ಧನ್ಯವಾದಗೈದರು. ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.