janadhvani

Kannada Online News Paper

ರಂಜಾನ್ ತಿಂಗಳಲ್ಲಿ 2,592 ಕೈದಿಗಳ ಬಿಡುಗಡೆ- ಆಡಳಿತಾಧಿಕಾರಿಗಳ ಆದೇಶ

ಕೈದಿಗಳಿಗೆ ಹೊಸ ಜೀವನ ನಡೆಸಲು ಅವಕಾಶ ನೀಡುವ ಭಾಗವಾಗಿ, ಆಡಳಿತಗಾರರು ರಂಜಾನ್ ಸಮಯದಲ್ಲಿ ಕೈದಿಗಳಿಗೆ ಕ್ಷಮೆ ನೀಡಿ ಬಿಡುಗಡೆಗೆ ಆದೇಶ ನೀಡುವುದು ವಾಡಿಕೆಯಾಗಿದೆ.

ದುಬೈ: ರಂಜಾನ್ ತಿಂಗಳಲ್ಲಿ ಯುಎಇಯಲ್ಲಿ 2,592 ಕೈದಿಗಳನ್ನು ಬಿಡುಗಡೆ ಮಾಡಲಾಗುವುದು. ಯುಎಇ ಅಧ್ಯಕ್ಷರು ಮತ್ತು ವಿವಿಧ ಎಮಿರೇಟ್‌ಗಳ ಆಡಳಿತಗಾರರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು 735 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದರು.

ದುಬೈ, ಶಾರ್ಜಾ, ಅಜ್ಮಾನ್ ಮತ್ತು ರಾಸ್ ಅಲ್ ಖೈಮಾದ ಆಡಳಿತಗಾರರು ವಿವಿಧ ಜೈಲುಗಳಲ್ಲಿರುವ ನೂರಾರು ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರು ದುಬೈನಲ್ಲಿರುವ 691 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದರು. ವಿವಿಧ ದೇಶಗಳ ಜನರನ್ನು ಬಿಡುಗಡೆ ಮಾಡಲಾಗಿದೆ.

ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ 484 ಕೈದಿಗಳ ಬಿಡುಗಡೆಗೆ ಆದೇಶಿಸಿದರು. ಜೈಲಿನಲ್ಲಿ ಉತ್ತಮ ನಡವಳಿಕೆ ಆಧಾರದ ಮೇಲೆಯಾಗಿದೆ ಬಿಡುಗಡೆ. ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಅಜ್ಮಾನ್ ಆಡಳಿತಗಾರ ಶೈಖ್ ಹುಮೈದ್ ಬಿನ್ ರಾಶಿದ್ ಅಲ್ ನುಐಮಿ 314 ಕೈದಿಗಳನ್ನು ಬಿಡುಗಡೆ ಮಾಡಿದರು. ರಾಸಲ್ ಖೈಮಾ ಆಡಳಿತಗಾರ ಶೈಖ್ ಸೌದ್ ಬಿನ್ ಸಖರ್ ಅಲ್ ಖಾಸಿಮಿ 368 ಕೈದಿಗಳನ್ನು ಬಿಡುಗಡೆ ಮಾಡಿದರು. ಕೈದಿಗಳಿಗೆ ಹೊಸ ಜೀವನ ನಡೆಸಲು ಅವಕಾಶ ನೀಡುವ ಭಾಗವಾಗಿ, ಆಡಳಿತಗಾರರು ರಂಜಾನ್ ಸಮಯದಲ್ಲಿ ಕೈದಿಗಳಿಗೆ ಕ್ಷಮೆ ನೀಡಿ ಬಿಡುಗಡೆಗೆ ಆದೇಶ ನೀಡುವುದು ವಾಡಿಕೆಯಾಗಿದೆ.

error: Content is protected !! Not allowed copy content from janadhvani.com