janadhvani

Kannada Online News Paper

ತೆರಿಗೆ: ವಿದೇಶೀ ವಿನಿಮಯ ಕಾನೂನು ರದ್ದತಿಗೆ ಪೂಂಜಾ ಆಗ್ರಹಿಸಲಿ- ಕೆ.ಅಶ್ರಫ್

ವಿದೇಶಿ ವಿನಿಮಯ ಶುಲ್ಕ, ಅಬಕಾರಿ ಶುಲ್ಕ,ಸೀಮಾ ಶುಲ್ಕದಂತಹ ಭಾರತಕ್ಕೆ ಆಗುತ್ತಿರುವ ಆದಾಯಗಳು ಹಿಂದುಯೇತರ ಮೂಲಗಳಿಂದ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿ ನಮ್ಮ ತೆರಿಗೆ ನಮ್ಮ ಹಕ್ಕು ಮತ್ತು ಹಿಂದೂಗಳು ಪಾವತಿಸುವ ತೆರಿಗೆ ಹಿಂದೂಗಳಿಗೆ ಮಾತ್ರ ವಿನಿಯೋಗವಾಗಬೇಕು ಎಂಬಿತ್ಯಾದಿಯಾಗಿ ಸಂಘ ಪ್ರೇರಿತ ಹೇಳಿಕೆ ನೀಡಿರುವ ವಿರುದ್ಧ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಪ್ರತಿಕ್ರಿಯಿಸಿದ್ದಾರೆ.

ಪೂಂಜಾ ಅವರು ಈ ದೇಶದ ವಿದೇಶೀ ವಿನಿಮಯ ಕಾನೂನು ಅಸ್ತಿತ್ವದಲ್ಲಿ ಇದೆಯೇ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುವುದು ಖೇದಕರ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಎಂದು ಬುರುಡೆ ಬಿಡುವ ಪೂಂಜಾ ಹಾಲಿ ಅಸ್ತಿತ್ವದಲ್ಲಿರುವ ವಿದೇಶಿ ವಿನಿಮಯ ಕಾನೂನು ಅನ್ನು ರದ್ದತಿ ಮಾಡಲು ಆಗ್ರಹಿಸಲಿ!. ಈ ದೇಶಕ್ಕೆ ಪಾವತಿ ಆಗುವಂತಹ ಅಗಾಧ ವಿದೇಶಿ ವಿನಿಮಯ ಶುಲ್ಕ, ಅಬಕಾರಿ ಶುಲ್ಕ,ಸೀಮಾ ಶುಲ್ಕದಂತಹ ಭಾರತಕ್ಕೆ ಆಗುತ್ತಿರುವ ಆದಾಯ ಹಿಂದುಯೇತರ ಮೂಲಗಳಿಂದ ಬರುತ್ತಿದ್ದು,ಪೂಂಜಾನಂತಹ ಅವಿವೇಕಿ ಜನರು ಇದನ್ನು ಸರಿಯಾಗಿ ತಿಳಿಯಬೇಕೆಂದು ಅಶ್ರಫ್ ಹೇಳಿದ್ದಾರೆ.

ಈ ದೇಶದ ಸಾಮಾನ್ಯ ಜನರ ತೆರಿಗೆ, ಕರ, ಶುಲ್ಕಗಳು ಆಯಾ ಸೇವೆಗೆ ಅನುಗುಣವಾಗಿ ಸರ್ಕಾರ ವಸೂಲಿ ಮಾಡುತ್ತಿದ್ದು ಯಾವುದೇ ಧರ್ಮದ ಆಧಾರದಲ್ಲಿ ಅಲ್ಲ ಎಂದು ತಿಳಿಯಬೇಕು. ಈ ದೇಶದ ಬಹು ಸಂಖ್ಯಾತ ವೈದಿಕೇತರರ ತರಿಗೆಯು ಈ ದೇಶದ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲು ವಿನಿಯೋಗ ಆಗುತ್ತಿದೆ ಎಂಬುದನ್ನು ಅರಿಯಬೇಕು. ಈ ದೇಶದ ವೈದಿಕೇತರ ಮೂಲದ ತೆರಿಗೆಯಿಂದ ನಿರ್ಮಿಸಲಾದ ಅದೆಷ್ಟೋ ಸಂಸ್ಥೆಗಳನ್ನು ಹಾಲಿ ಕೇಂದ್ರ ಸರ್ಕಾರದಲ್ಲಿರುವ ಪ್ರತಿನಿಧಿ ಮುಖ್ಯಸ್ಥರು ಅಂಬಾನಿ,ಅದಾನಿ ಗೆ ಮಾರಾಟ ಮಾಡಿದ್ದು, ಇನ್ನು ಜನರು ಪಾವತಿಸುವ ತೆರಿಗೆ ಸಂಗ್ರಹಕ್ಕೂ ಅಂಬಾನಿ, ಅದಾನಿಗಳನ್ನು ನೇಮಿಸುವ ತಮ್ಮ ಷಡ್ಯಂತ್ರದ ಹೇಳಿಕೆಗೆ ಜನರು ಬಲಿಯಾಗಲಾರರು,ತಿಳಿದಿರಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com