ದೋಹಾ: ಕತಾರ್‌ನಲ್ಲಿ ಹಯ್ಯಾ ವೀಸಾದ ಮಾನ್ಯತೆಯನ್ನು ಫೆಬ್ರವರಿ 24, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಕತಾರ್ ಆಂತರಿಕ ಸಚಿವಾಲಯ ಪ್ರಕಟಿಸಿದೆ.ಹಯ್ಯಾ ಮತ್ತು ಹಯ್ಯಾ ವಿಥ್ ಮಿ ವೀಸಾಗಳನ್ನು ಮುಂದಿನ ವರ್ಷ ಫೆಬ್ರವರಿ 24 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಜನವರಿ 24, 2024 ರಂದು ಕೊನೆಗೊಳ್ಳಲಿದೆ ಎಂದು ಘೋಷಿಸಲಾಗಿತ್ತು.
ದೇಶವನ್ನು ಪ್ರವೇಶಿಸಲು ಫೆಬ್ರವರಿ 10 ಕೊನೆಯ ದಿನವಾಗಿದೆ. ಜನವರಿ 12 ರಂದು ಆರಂಭವಾಗಲಿರುವ ಏಷ್ಯನ್ ಕಪ್ ಫುಟ್ಬಾಲ್ ವೀಕ್ಷಿಸಲು ಅವಕಾಶವನ್ನು ಒದಗಿಸುವ ಭಾಗವಾಗಿ, ಹಯ್ಯಾ ವೀಸಾ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲಾಗಿದೆ.
ವಿಶ್ವಕಪ್ ಟಿಕೆಟ್ ಖರೀದಿಸಿದ ವಿದೇಶಿಯರಿಗೆ ಹಯ್ಯಾ ವೀಸಾವನ್ನು ನೀಡಲಾಗಿತ್ತು. ಹಯ್ಯಾ ವಿಥ್ ಮಿ ಸೌಲಭ್ಯದ ಅಡಿಯಲ್ಲಿ ಇನ್ನೂ ಮೂರು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಕತಾರ್‌ಗೆ ಕರೆತರಲು ಅವಕಾಶ ನೀಡಲಾಗಿತ್ತು.