janadhvani

Kannada Online News Paper

ಜವಾಬ್ದಾರಿ ನೀಡಿದ ಕಾಂಗ್ರೆಸ್‌ನ ವಿಶ್ವಾಸ ಪಡೆಯುವುದು ಮುಖ್ಯ-ಎಚ್‌.ಡಿ.ಕುಮಾರಸ್ವಾಮಿ

ಹಾಸನ:‘ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲ ಮಾಧ್ಯಮಗಳ ಸೃಷ್ಟಿ. ಸಾಮಾಜಿಕ ಜಾಲತಾಣ, ಪತ್ರಿಕೆಯಲ್ಲಿ ಬರುವ ಲೇಖನ ಓದಿ ಮೆದುಳಿನಲ್ಲಿ ತುಂಬಿಕೊಂಡಿದ್ದೇನೆ. ಅದಕ್ಕೆ ಮುಂದಿನ‌ ದಿನಗಳಲ್ಲಿ ಉತ್ತರ ನೀಡುವೆ.‌ ಮುಖ್ಯಮಂತ್ರಿ ಜವಾಬ್ದಾರಿ ನಿರ್ವಹಿಸಲು ಜವಾಬ್ದಾರಿ ನೀಡಿದ ಕಾಂಗ್ರೆಸ್‌ನ ವಿಶ್ವಾಸ ಪಡೆಯುವುದು ಮುಖ್ಯ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಕಾಂಗ್ರೆಸ್ , ಬಿಜೆಪಿ, ಶ್ರೀ ರಾಮುಲು ಸೇರಿದಂತೆ ಯಾರು ನನ್ನನ್ನು ನಿದ್ದೆ ಗೆಡಿಸಲು ಸಾಧ್ಯ ಇಲ್ಲ. ಬಿಜೆಪಿ ನಿದ್ದೆಗೆಡುವಂತೆ ನಾನು ಮಾಡುವೆ’ ಎಂದು ಕುಮಾರಸ್ವಾಮಿ ಹೇಳಿದರು.

ಹೊಳೆನರಸೀಪುರದ ಹೆಲಿಪ್ಯಾಡ್‌ನಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಬಂದ ಎಚ್‌ಡಿಕೆ ಅವರನ್ನು ಸಹೋದರ ಎಚ್.ಡಿ.ರೇವಣ್ಣ‌ ಸ್ವಾಗತಿಸಿದರು.

‘ಇದು ತಾತ್ಕಾಲಿಕ ಸರ್ಕಾರ ಅಲ್ಲ.‌ ಐದು ವರ್ಷ ಸುಭದ್ರ ಸರ್ಕಾರ ನೀಡುವೆ.‌ ಜನರ ಭರವಸೆಗಳನ್ನು ಈಡೇರಿಸಲು ಪ್ರಯತ್ನ ಮಾಡುವೆ’ ಎಂದರು.

‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡುತ್ತೇನೆ’ ಅವರು ತಿಳಿಸಿದರು.