ಕಲ್ಲಿಕೋಟೆ: ಎರ್ನಾಕುಲಂನ ಕಳಮಶ್ಶೇರಿಯಲ್ಲಿ ಯೆಹೋವನ ಸಾಕ್ಷಿಗಳ ಸಭೆಯ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟವು ತುಂಬಾ ದುಃಖಕರ ಮತ್ತು ಆಘಾತಕಾರಿಯಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ವಿವಿಧ ಸಮುದಾಯಗಳು ಸೌಹಾರ್ದಯುತವಾಗಿ ಮತ್ತು ಶಾಂತಿಯುತವಾಗಿ ಬದುಕುತ್ತಿರುವ ಕೇರಳದ ಸಾಮಾಜಿಕ ವಾತಾವರಣವನ್ನು ಹಾಳುಮಾಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಧಾರ್ಮಿಕ ವೈಷಮ್ಯ, ಕೋಮುವಾದ ಬೆಳೆಯದಂತೆ ಎಲ್ಲ ಜನರು ಹಾಗೂ ಕಾನೂನು ಪರಿಪಾಲಕರು ಜಾಗೃತರಾಗಬೇಕು. ಹಿಂಸಾಚಾರಕ್ಕೆ ಬಲಿಯಾದವರ ನೋವಿನಲ್ಲಿ ಭಾಗಿಯಾಗುತ್ತಿರುವುದಾಗಿ ಕಾಂತಪುರಂ ಉಸ್ತಾದರು ತಮ್ಮ ಫೇಸ್ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.