janadhvani

Kannada Online News Paper

ಸಂದರ್ಶಕ ವೀಸಾದಲ್ಲಿದ್ದ ಸೀದಿಯಬ್ಬ ಉಳ್ಳಾಲ ದಮ್ಮಾಮ್‌ನಲ್ಲಿ ನಿಧನ

ದಮ್ಮಾಮ್: ಸೌದಿ ಅರೇಬಿಯಾಕ್ಕೆ ಕುಟುಂಬ ಸಮೇತ ಸಂದರ್ಶಕ ವಿಸಾದಲ್ಲಿ ಉಮ್ರಾಕ್ಕೆ ಆಗಮಿಸಿದ್ದ ಸೀದಿಯಬ್ಬ ನಡುಮನೆ ಉಳ್ಳಾಲ ಇವರು ಅನಾರೋಗ್ಯದಿಂದ ದಮ್ಮಾಮ್ ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.

ಮೃತರ ಅಂತ್ಯಕ್ರಿಯೆಗೆ ಬೇಕಾದ ದಾಖಲೆ ಪತ್ರಗಳನ್ನು ಸರಿಪಡಿಸಲು, ಮಗ ಮುಹಮ್ಮದ್ ಇಬ್ರಾಹಿಂ ಉಳ್ಳಾಲ ಇವರೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ದಮ್ಮಾಮ್ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ.