janadhvani

Kannada Online News Paper

ಎಸ್ ವೈ ಎಸ್ 30ನೇ ವರ್ಷಾಚರಣೆಯ ಪ್ರಚಾರ- ರಾಜ್ಯ ನಾಯಕರ ಜ್ಯೂಬಿಲಿ ಜರ್ನಿ

'ಪರಂಪರೆಯ ಪ್ರತಿನಿಧಿಗಳಾಗೋಣ' ಎಂಬ ಧ್ಯೇಯ ವಾಕ್ಯದಡಿಯಲ್ಲಿ 2024 ರ ಜನವರಿ 24ರಂದು ಮಂಗಳೂರಿನಲ್ಲಿ ಎಸ್ ವೈ ಎಸ್ 30ನೇ ವಾರ್ಷಿಕ ಮಹಾ ಸಮ್ಮೇಳನ

ನೆಲ್ಯಾಹುದಿಕೇರಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈ‌ಎಸ್) 30ನೇ ವರ್ಷಾಚರಣೆಯ ಪ್ರಯುಕ್ತ ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ 2024 ರ ಜನವರಿ 24ರಂದು ಮಂಗಳೂರಿನಲ್ಲಿ ನಡೆಯುವ ಮಹಾ ಸಮ್ಮೇಳನದ ಪ್ರಚಾರಾರ್ಥ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ರಾಜ್ಯ ಸಮಿತಿ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮವು ನೆಲ್ಯಾಹುದಿಕೇರಿಯ ದಾರುನ್ನಜಾತ್ ಹಾಗೂ ಕಡಂಗದ ಬದ್ರಿಯ ಮದ್ರಸದಲ್ಲಿ ನಡೆಯಿತು.

30 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಸಮಾಜ ಸೇವೆ ಸಹಿತ ಹಲವಾರು ಕಾರ್ಯಕ್ರಮಗಳನ್ನು ವಿವಿಧ ಘಟಕಗಳಲ್ಲಿ ಹಮ್ಮಿಕೊಂಡಿದ್ದು, ಅವುಗಳೆಲ್ಲವನ್ನೂ ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಿ ಸೇವಾ ಮನೋಭಾವವಿರುವ ಉತ್ತಮ ಕಾರ್ಯಕರ್ತರನ್ನು ಸೃಷ್ಟಿಸುವಂತೆಯೂ ಮಂಗಳೂರಿನಲ್ಲಿ ನಡೆಯುವ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆಯೂ ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಹಫೀಳ್ ಸ‌ಅದಿ ಕರೆ ನೀಡಿದರು.

ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಾತನಾಡಿ ಕಾರ್ಯಚಟುವಟಿಕೆಗಳ ರೂಪುರೇಷೆಗಳನ್ನು ವಿವರಿಸಿದರು.

ಕೋಶಾಧಿಕಾರಿ ಅಡ್ವಕೇಟ್ ಹಂಝತ್ ಉಡುಪಿ ,ದ‌ಅವಾ ವಿಭಾಗ ಕಾರ್ಯದರ್ಶಿ ಸಯ್ಯಿದ್ ಶಾಫಿ ನ‌ಈಮಿ ತಂಙ್ಙಳ್, ಸಾಂತ್ವನ ವಿಭಾಗ ಕಾರ್ಯದರ್ಶಿಯೂ ಕೊಡಗು ಜಿಲ್ಲಾ ಉಸ್ತುವಾರಿಯೂ ಆದಂತಹ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಮಾಧ್ಯಮ ಕಾರ್ಯದರ್ಶಿ ಹಸೈನಾರ್ ಆನೆಮಹಲ್, ಸಯ್ಯಿದ್ ಇಲ್ಯಾಸ್ ತಂಙ್ಙಳ್, ವಿ ಪಿ ಮೊಯ್ದೀನ್, ಅಬ್ದುಲ್ಲ, ಆಸಿಫ್ ಸೇರಿದಂತೆ ಇನ್ನಿತರ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಅಹಮದ್ ಮದನಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !! Not allowed copy content from janadhvani.com