ನವದೆಹಲಿ,ಅ.19-ಹೇರ್ ರಿಲ್ಯಾಕ್ಸ್ ಉತ್ಪನ್ನಗಳ ಬಳಕೆಯು ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ಗ್ರಾಹಕರು ಅಮೆರಿಕ ಮತ್ತು ಕೆನಡಾದಲ್ಲಿ ಮೊಕದ್ದಮೆ ಹೂಡಿರುವ ಕಂಪನಿಗಳಲ್ಲಿ ತನ್ನ ಅಂಗಸಂಸ್ಥೆಗಳು ಸೇರಿವೆ ಎಂದು ಡಾಬರ್ ಇಂಡಿಯಾ ಸಂಸ್ಥೆ ಹೇಳಿಕೊಂಡಿದೆ.
ಪ್ರಸ್ತುತ ಮೊಕದ್ದಮೆ ದಾಖಲಾದ ಪ್ರಕರಣಗಳಲ್ಲಿ ಈ ಆರೋಪದ ಬಗ್ಗೆ ಪತ್ತೆ ಮಾಡುವ ಆರಂಭಿಕ ಹಂತದಲ್ಲಿವೆ. ಈ ಆರೋಪಗಳು ಸಾಮಾನ್ಯವಲ್ಲದ ಅಪೂರ್ಣ ಅಧ್ಯಯನವನ್ನು ಆಧರಿಸಿವೆ ಎಂದು ಸಂಸ್ಥೆ ಹೇಳಿದೆ.ಅಮೆರಿಕಾದ ಇಲಿನಾಯ್ಸ್ನಲ್ಲಿರುವ ಯುಎಸ್ ಜಿಲ್ಲಾ ನ್ಯಾಯಾಲಯದ ಮುಂದೆ ಈ ಎಲ್ಲಾ ಪ್ರಕರಣಗಳಿವೆ ಎಂದು ಡಾಬರ್ ಇಂಡಿಯಾ ಪ್ರಕಟಣೆಯಲ್ಲಿ ಹೇಳಿದೆ.
ಗ್ರಾಹಕ ಸರಕುಗಳ ಸಂಸ್ಥೆಯು ತನ್ನ ಅಂಗಸಂಸ್ಥೆಗಳಾದ ನಮಸ್ತೆ ಲ್ಯಾಬೊರೇಟರೀಸ್, ಡರ್ಮೊವಿವಾ ಸ್ಕಿನ್ ಎಸೆನ್ಷಿಯಲ್ಸ್ ಮತ್ತು ಡಾಬರ್ ಇಂಟರ್ನ್ಯಾಶನಲ್ ಸೇರಿದಂತೆ ಹಲವಾರು ಕಂಪನಿಗಳ ವಿರುದ್ಧ ಸುಮಾರು 5,400 ಪ್ರಕರಣಗಳು ದಾಖಲಾಗಿವೆ.
ಡಾಬರ್ ಇಂಡಿಯಾವೂ ವಾಟಿಕಾ ಶಾಂಪೂ, ಹೋನಿಟಸ್ ಎಂಬ ಕೆಮ್ಮಿನ ಸಿರಪ್ನ್ನು ಮಾರಾಟ ಮಾಡುತ್ತದೆ. ಈ ಹಂತದಲ್ಲಿ ಪ್ರಕರಣದ ಇತ್ಯರ್ಥ ಅಥವಾ ತೀರ್ಪಿನ ಫಲಿತಾಂಶದಿಂದ ಸಂಸ್ಥೆಗೆ ಆಗುವ ಹಣಕಾಸಿನ ಪರಿಣಾಮಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ರಕ್ಷಣಾ ವೆಚ್ಚದ ಮಿತಿಯನ್ನು ಮೀರುವ ಸಾಧ್ಯತೆ ಇದೆ ಎಂದು ಹೇಳಿದೆ.