janadhvani

Kannada Online News Paper

ಕೆಸಿಎಫ್ ಅಲ್ ಖೋರ್ ಯೂನಿಟ್ ಖತ್ತರ್ ಮಹಬ್ಬಃ ಮೀಲಾದ್ ಕಾನ್ಫರೆನ್ಸ್

ಖತ್ತರ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮದೀನ ಖಲೀಫಾ ಝೋನ್ ಅಲ್ ಖೋರ್ ಯೂನಿಟ್ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ತಿಂಗಳ ಪ್ರಯುಕ್ತ ಜಗತ್ತಿಗೆ ಕರುಣೆಯ ಪ್ರವಾದಿ ಘೋಷವಾಕ್ಯದೂಂದಿಗೆ ಮಹಬ್ಬ ಮೀಲಾದ್ ಕಾನ್ಫರೆನ್ಸ್ ಮತ್ತು ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 13-10-2023 ರಂದು ಅಲ್ ಖೋರ್ ಲೈಮೂನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.

ಕೆಸಿಎಫ್ ಅಲ್’ಕೋರ್ ಯುನಿಟ್ ಅಧ್ಯಕ್ಷರಾದ ಅಬ್ಬಾಸ್ ಕೆದುಂಬಾಡಿ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟಣಾ ವಿಭಾಗ ಕಾರ್ಯದರ್ಶಿ ಉಮರುಲ್ ಫಾರುಖ್ ಸಖಾಫಿ ಕೊಡಗುರವರು ಉದ್ಘಾಟಿಸಿದರು. ಈ‌ ಸಂದರ್ಭದಲ್ಲಿ ಮಾತನಾಡಿದ ಅವರು, ರಬೀವುಲ್ ತಿಂಗಳ ಮೀಲಾದ ಆಚರಣೆಯ ಮಹತ್ವ ಹಾಗೂ ಅಲ್ ಖೋರ್ ಯೂನಿಟ್ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲೀಸ್ ಬಗ್ಗೆ ಪ್ರಶಂಸನೀಯವಾಗಿ ವಿವರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಐಸಿಎಫ್ ಅಲ್ ಖೋರ್ ದ’ಅ್’ವಾ ಅಧ್ಯಕ್ಷರಾದ ಮಹಮ್ಮದ್ ಉಸ್ತಾದ್ ತಿರುವಳ್ಳೋರವರು ಹುಬ್ಬುರ್ರಸೂಲ್ ಮುಖ್ಯಪ್ರಬಾಷಣ ಮಾಡುತ್ತಾ ಪ್ರವಾದಿ (ಸ.ಅ) ಯವರ ಜೀವನ ಚರಿತ್ರೆ ಹಾಗೂ ಪ್ರವಾದಿಯವರ ಸ್ನೇಹದ ಮಹತ್ವ ವನ್ನು ಸವಿಸ್ತಾರವಾಗಿ ವಿವರಿಸಿದರು. ಐಸಿಎಫ್ ಅಲ್ ಖೋರ್ ಸೆಕ್ಟರ್ ಅದ್ಯಕ್ಷರಾದ ಕಲಾಂ ಹಾಜಿ ಹಾಗೂ ಕೆಸಿಎಫ್ ಖತರ್ ರಾಷ್ಟ್ರೀಯ ‌ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಆಶಂಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆಸಿಎಫ್ ಖತರ್ ರಾಷ್ಟ್ರೀಯ ನಾಯಕರಾದ ಅಂದುಮಾಯಿ ನಾವುಂದ, ಖಾಲಿದ್ ಹಿಮಮಿ ಉಸ್ತಾದ್, ಮಿರ್ಶಾದ್ ಕನ್ಯಾನ, ಶಾಫಿ ಲತೀಫಿ ಉಸ್ತಾದ್, ಡಿಕೆಎಸ್’ಸಿ ಅಧ್ಯಕ್ಷರಾದ ಸುಲೈಮಾನ್ ಮುಂಡ್ಕೂರ್ ಸ್ವಾಲಿಹ್ ಉಸ್ತಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಮದೀನ ಖಲೀಫಾ ಝೋನ್ ಅದ್ಯಕ್ಷರಾದ ಇಸ್ಹಾಖ್ ನಿಝಾಮಿ ಅಲ್ ಹಿಖಮಿ ಉಸ್ತಾದ್ ಹಾಗೂ ಸಂಗಡಿಗರಿಂದ ಮೌಲಿದ್ ಮತ್ತು ಬುರ್ದಾ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಭಾಗವಾಗಿ ಪವಿತ್ರ ರಬೀವುಲ್ ಅವ್ವಲ್ ತಿಂಗಳಲ್ಲಿ ಅತೀ ಹೆಚ್ಚು ಸ್ವಲಾತ್ ಪಠಿಸಿದದರಿಗೆ ಹಾಗೂ ಮಕ್ಕಳ ಪ್ರತಿಭಾನ್ವಿತ ಹಾಡಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮರ್ಕಝುಲ್ ಇಸ್ಲಾಮಿಯ ಸಹಾಯಧನ ಸಂಗ್ರಹಿಸುವಲ್ಲಿ ಮುಂಚೂಣಿಯಾಗಿ ಹೊರಬಂದ ಅಲ್ ಖೋರ್ ಯುನಿಟ್’ಗೆ ರಾಷ್ಟ್ರೀಯ ಸಮಿತಿಯಿಂದ ಸ್ಮರಣಿಕೆ ನೀಡಿ‌ ಪ್ರಶಂಸಿಸಲಾಯಿತು.

ಕೆಸಿಎಫ್ ಶಿಕ್ಷಣ ವಿಭಾಗ ಕಾರ್ಯದರ್ಶಿ ಸಿದ್ದೀಖ್ ಹಂಡುಗೂಳಿ ಸ್ವಾಗತಿಸಿ, ಇಸ್ಮಾಯಿಲ್ ಉಪ್ಪಳ್ಳಿ ವಂದಿಸಿದರು. ಸಾದಿಖ್ ಕಡಬ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com