janadhvani

Kannada Online News Paper

ಒತ್ತೆಯಾಳಾಗಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆಗೊಳಿಸಿದ ಹಮಾಸ್

ಹಮಾಸ್ ಕೈಯಲ್ಲಿ US ಮತ್ತು UK ನಾಗರಿಕರು ಸೇರಿದಂತೆ 150 ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ. ಅವರನ್ನು ಬಿಡುಗಡೆ ಮಾಡಿದ ನಂತರ ಭೂ ದಾಳಿ ಆರಂಭಿಸಬಹುದೆಂದು ಇಸ್ರೇಲ್ ನಂಬಿದೆ.

ಜೆರುಸಲೇಂ: ಒತ್ತೆಯಾಳಾಗಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲಿ ಜೈಲಿನಲ್ಲಿರುವ ಹಮಾಸ್ ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ವಿಚಾರದಲ್ಲಿ ಕತಾರ್ ವಿದೇಶಾಂಗ ಸಚಿವರು ಮಧ್ಯಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಲಭಿಸಿದೆ. ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದ ಇಸ್ರೇಲ್ ಮತ್ತು ಹಮಾಸ್ ನಡುವೆ ಸ್ವಲ್ಪ ಚಲನವಲನಗಳು ಇರಲಿದೆ ಎಂಬ ಸೂಚನೆಯಿದೆ.ಆದ್ದರಿಂದಲೇ ಭೂಮಾರ್ಗದ ಯುದ್ಧವು ಪ್ರಾರಂಭಗೊಂಡಿಲ್ಲ ಎನ್ನಲಾಗಿದೆ.

ಹಮಾಸ್ ಕೈಯಲ್ಲಿ US ಮತ್ತು UK ನಾಗರಿಕರು ಸೇರಿದಂತೆ 150 ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ. ಅವರನ್ನು ಬಿಡುಗಡೆ ಮಾಡಿದ ನಂತರ ಭೂ ದಾಳಿ ಆರಂಭಿಸಬಹುದೆಂದು ಇಸ್ರೇಲ್ ನಂಬಿದೆ. ಆದರೆ, ಅವರು ಪತ್ತೆಯಾಗಲ್ಲ ಎಂದು ಹಮಾಸ್ ಹೇಳಿದೆ. ಭೂಗತ ಕೋಣೆಗಳಲ್ಲಿ ಇರಿಸಲಾಗಿದೆ ಎಂದೂ ಹೇಳಲಾಗಿದೆ. ಆದ್ದರಿಂದ, ಇಸ್ರೇಲ್‌ಗೆ ಭೂ ದಾಳಿ ನಡೆಸಲು ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೆ, ಹಮಾಸ್ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಬಿಡುಗಡೆ ಮಾಡಿದೆ.

ಏತನ್ಮಧ್ಯೆ, ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಸತತ ಆರನೇ ದಿನವೂ ಮುಂದುವರೆದಿದೆ. ಮರಣ ಸಂಖ್ಯೆ 1200 ದಾಟಿದೆ. ನೀರು ಮತ್ತು ಆಹಾರ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆ ಇದೆ. ಯುಎನ್ ಸೆಕ್ರೆಟರಿ ಜನರಲ್ ಗಾಝಾಗೆ ಅಗತ್ಯ ವಸ್ತುಗಳನ್ನು ತಲುಪಿಸಲುಎಂದು ಮನವಿ ಮಾಡಲಾಗಿದೆ.

ಕೊಲ್ಲಲ್ಪಟ್ಟ ಇಸ್ರೇಲಿ ಸೈನಿಕರ ಸಂಖ್ಯೆ 220. ಏತನ್ಮಧ್ಯೆ, ಇಸ್ರೇಲಿ ಪಡೆಗಳು ಗಡಿಯುದ್ದಕ್ಕೂ ನೆಲೆಗೊಂಡಿದೆ,ಭೂಮಾರ್ಗದ ಯುದ್ಧಕ್ಕೆ ಸಿದ್ಧವಾಗಿವೆ. ಏತನ್ಮಧ್ಯೆ, ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಮತ್ತು ಯುಎಸ್ ಅಧ್ಯಕ್ಷ ಬಿಡೆನ್ ಈ ವಿಷಯದ ಬಗ್ಗೆ ಚರ್ಚಿಸಿದರು.

error: Content is protected !! Not allowed copy content from janadhvani.com