ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ಮಾಸದ ಪ್ರಯುಕ್ತ, ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷವಾಕ್ಯದೊಂದಿಗೆ ಮಹಬ್ಬಾ ಮೀಲಾದ್ ಕಾನ್ಫರೆನ್ಸ್ ದಿನಾಂಕ 06-10-2023 ರಂದು ದೋಹಾದ ಶಾಲಿಮಾರ್ ಇಸ್ತಾಂಬುಲ್ ಸಭಾಂಗಣದಲ್ಲಿ ನಡೆಯಿತು.
ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವು,ವಿಶೇಷ ಅತಿಥಿಯಾಗಿ ಖತ್ತರ್’ಗೆ ಆಗಮಿಸಿದ್ದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾದಿಯವರ ಜೀವನ ಚರಿತ್ರೆಯ ಕುರಿತಾಗಿ ಸಂಕ್ಷಿಪ್ತವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ|ಮುಹಮ್ಮದ್ ಕುಂಞ ಸಖಾಫಿ ಕೊಲ್ಲಂ ರವರು ಪ್ರವಾದಿಯವರ ಸ್ನೇಹದ ಮಹತ್ವ ಹಾಗೂ ಪ್ರವಾದಿವರ ಅನುಯಾಯಿಗಳಾದ ಸ್ವಹಾಬಿಗಳು ಯಾವ ರೀತಿ ಪ್ರವಾದಿಗಳ ಮೇಲೆ ಪ್ರೀತಿಯನ್ನು ಹೊಂದಿದ್ದುದರ ಬಗ್ಗೆ ಸಭಿಕರನ್ನುದ್ದೇಶಿಸಿ ಹುಬ್ಬುರ್ರಸೂಲ್ ಪ್ರಭಾಷಣಗೈದರು.
ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಅಧ್ಯಕ್ಷ ಕಬೀರ್ ಹಾಜಿ ದೇರಳಕಟ್ಟೆ, ಖತ್ತರ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಹಾಜಿ ಮಾಗುಂಡಿ, ಶಿಕ್ಷಣ ವಿಭಾಗ ಅಧ್ಯಕ್ಷ ಖಾಲಿದ್ ಹಿಮಮಿ ಬೊಳಂತೂರು, ಅಡ್ಮಿನ್ ವಿಭಾಗ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ, ಪ್ರಕಾಶನ ವಿಭಾಗದ ಅಧ್ಯಕ್ಷ ಯಹ್ಯಾ ಸ’ಅದಿ ವಿರಾಜಪೇಟೆ, ಸಂಘಟನಾ ವಿಭಾಗದ ಅಧ್ಯಕ್ಷ ಮಿರ್ಶಾದ್ ಕನ್ಯಾನ, ಸಾಂತ್ವನ ವಿಭಾಗ್ ಅಧ್ಯಕ್ಷ್ ಹಾಗೂ ಮಹಬ್ಬಾ ಕಾನ್ಫರೆನ್ಸ್ ಸ್ವಾಗತ ಸಮಿತಿ ಕನ್ವೀನರ್ ಹಸನ್ ಪೂಂಜಾಲ್’ಕಟ್ಟೆ, ಅಲ್’ಮದೀನಾ ಮಂಜನಾಡಿ ಖತ್ತರ್ ಅಧ್ಯಕ್ಷ ಹಾಜಿ ಅರಬಿ ಕುಂಞ, ಸುನ್ನೀ ಸೆಂಟರ್ ಖತ್ತರ್ ಅಧ್ಯಕ್ಷ ಸುಲೈಮಾನ್ ಮುಂದ್ಕೂರು, ಕೆಸಿಎಫ್ ನಾಯಕರಾದ ಅಂದುಮಾಯಿ ನಾವುಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಕಾರ್ಯದರ್ಶಿಯಾದ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಕೊಡಗು ರವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಭಾಗವಾಗಿ ಕೆಸಿಎಫ್ ಮದೀನಾ ಖಲೀಫಾ ಝೋನ್ ಅಧ್ಯಕ್ಷರಾದ ಇಸ್ಹಾಖ್ ನಿಝಾಮಿ ಹಾಗೂ ಸಂಗಡಿಗರಿಂದ ಸುಮಧುರವಾದ ಬುರ್ದಾ ಹಾಡು ಮೂಡಿಬಂತು.
ಅಂತರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವದಲ್ಲಿ ಖತ್ತರ್ ನಿಂದ ಪ್ರತಿನಿಧಿಸಿ ಜಯಿಸಿದ ಪ್ರತಿಭೆಗಳಿಗೆ, ಸ್ವಾಲಿಹಾ ಕೋರ್ಸ್ ನಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಜೀ-ಮೀಟ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿದ ಹಾಗೂ ಮರ್ಕಝುಲ್ ಇಸ್ಲಾಮಿ ಸಹಾಯಧನ ಸಂಗ್ರಹಿಸುವಲ್ಲಿ ಮುಂಚೂಣಿಯಲ್ಲಿದ್ದ ಸೆಕ್ಟರ್’ಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ಶಿಕ್ಷಣ ವಿಭಾಗ ಕಾರ್ಯದರ್ಶಿ ಸಿದ್ದೀಖ್ ಹಂಡುಗೂಳಿ ವಂದಿಸಿದರು. ರಾಷ್ಟ್ರೀಯ ನಾಯಕರಾದ ಝುಕರಿಯ್ಯಾ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.