ಮಂಗಳೂರು: ಇತ್ತೀಚೆಗೆ ಯಾದಗಿರಿಯಲ್ಲಿ ಆಂದೋಲಶ್ರೀ ಎಂಬ ‘ ಹರಕು ಪ್ರತಿಪಾದಿ ‘ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡುತ್ತಾ, ಇಲ್ಲಿ ಒಂದು ನಿರ್ಧಿಷ್ಟ ಸಮುದಾಯವನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗಲಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು, ಆಂದೋಲಶ್ರೀ ಎಂಬ ಹರಕುಬಾಯಿ ತಿಳಿಯಬೇಕು, ಕರ್ನಾಟಕ ಎಂಬುದು ಬುದ್ಧನ ಮೈತ್ರಿಯ ಪರಂಪರೆಯುಳ್ಳ ನಾಡು. ಕ್ರಾಂತಿಯೋಗಿ ಬಸವಣ್ಣನ ಬೀಡು,ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ,ನಾರಾಯಣ ಗುರುಗಳ ಸಮಾನತೆಯ ತಾಣ, ಸಂತ ಶಿಶುನಾಳ ಶರೀಫರ ಬೆಸುಗೆಯ ವನ, ಹಜ್ರತ್ ಟಿಪ್ಪು ಸುಲ್ತಾನರ ಧೈರ್ಯಶಾಲಿ ನೆಲೆಬೀಡು, ಈ ನಾಡಿನ ಸಾಮರಸ್ಯವನ್ನು ಕೆಣಕಿದರೆ ಈ ಹಿಂದೆ ಕರ್ನಾಟಕದ ಜನತೆ ನೀಡಿದ ಜನಾದೇಶದಂತೆ ಮುಂದಿನ ಜನಾದೇಶದಲ್ಲಿ ಕರ್ನಾಟಕ ‘ಆಹಿಂದವಾಸಿ ರಾಜ್ಯ’ ಎಂದು ಸಾಬೀತು ಪಡಿಸಲಿದೆ ಎಂದಿದ್ದಾರೆ.
ಆಂದೋಲಶ್ರಿ ಎಂಬವ,ಕರ್ನಾಟಕದಲ್ಲಿ ಬುದ್ಧನ ಮೈತ್ರಿಯ ವಿರುದ್ದ ತನ್ನ ವಕ್ರ ನಾಲಗೆಯಲ್ಲಿ ಅದೇಷ್ಟೋ ಆಂದೋಲನ ನಡೆಸಿದರೂ ಕರ್ನಾಟಕ ನಾಡಿನ ಜನತೆ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶಕ್ಕೆ ಅರ್ಪಿಸಿದ ಸಂವಿದಾನದ ಬಾತ್ರತ್ವವನ್ನು ಸಂರಕ್ಷಣೆ ಮಾಡುತ್ತಾರೆಯೇ ಹೊರತು ಆಂದೋಲಶ್ರೀಯ ಅಂಧಕಾರಿ ಪ್ರಚೋದನೆಯನ್ನಲ್ಲ ಎಂದು ಅರಿತು ತೆಪ್ಪಗೆ ಇರುವುದು ಒಳಿತು ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.