ದಮಾಮ್: ಉತ್ತರ ಕರ್ನಾಟಕದ ಶೈಕ್ಷಣಿಕ ಚಳುವಳಿಯಲ್ಲಿ ಮಾದರೀ ಸೇವೆ ಸಲ್ಲಿಸುತ್ತಿರುವ ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ವತಿಯಿಂದ ಪೈಗಾಮೆ ಪೈಗಂಬರ್ ﷺ ಕಾರ್ಯಕ್ರಮ ದಮಾಮ್ ಹಾಲಿಡೇಸ್ ರೆಸ್ಟೋರೆಂಟ್‌ನಲ್ಲಿ ನಡೆಯಿತು.
ಮಸ್‌ದರ್ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಸಭೆಯನ್ನು ಉದ್ಘಾಟಿಸಿದರು. ಪ್ರಮುಖ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ನಾಯಕ ಅಬೂಬಕ್ಕರ್ ಹಾಜಿ ರೈಸ್ಕೋ ಹಾಗೂ ಜನಾಬ್ ಅಬ್ದುಸ್ಸತ್ತಾರ್ ಜಯಪುರ ಮಾತನಾಡಿದರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಖ್ಯ ಭಾಷಣ ಮಾಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂ ಸುಫ್ಯಾನ್ ಮದನಿ ಹಾಗೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ರವರನ್ನು ಕೆಸಿಎಫ್, ಡಿಕೆಎಸ್‌ಸಿ,ದಾರುಲ್ ಇರ್ಶಾದ್, ಮಲೆನಾಡು ಗಲ್ಫ್ ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳ ನಾಯಕರು ಸನ್ಮಾನಿಸಿದರು.
ಮಸ್‌ದರ್ ದಮಾಮ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಗೌರವಾಧ್ಯಕ್ಷರಾಗಿ ಅಲ್ ಹಾಜ್ ರೈಸ್ಕೋ ಅಬೂಬಕ್ಕರ್ ಪಡುಬಿದ್ರಿ ನಿರ್ದೇಶಕರಾಗಿ ಸಯ್ಯಿದ್ ಅಬ್ಬಾಸ್ ಖಾದ್ರಿ ಹೂಡೆ, ಸಯ್ಯದ್ ಬಾವಾ ಬಜ್ಪೆ, ಶಾಹುಲ್ ಹಮೀದ್ ಉಜಿರೆ, ಶರೀಫ್ ಇಕ್ಬಾಲ್ ಬಜ್ಪೆ ರವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಜನಾಬ್ ಅಬ್ದುಸ್ಸತ್ತಾರ್ ಜಯಪುರ, ಉಪಾಧ್ಯಕ್ಷರುಗಳಾಗಿ ಹಾಜಿ ಬಶೀರ್ ಕೃಷ್ಣಾಪುರ, ತಾಜುದ್ದೀನ್ ಕಾಟಿಪಳ್ಳ, ಜನಾಬ್ ಮುಸ್ತಫಾ ಕಾಟಿಪಳ್ಳ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ನಾವುಂದ ಕಾರ್ಯದರ್ಶಿಗಳಾಗಿ ಫೈಝಲ್ ಕೃಷ್ಣಾಪುರ, ಇಬ್ರಾಹಿಂ ವಳವೂರು ಹಾಗೂ ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕಾಟಿಪಳ್ಳ ರವರನ್ನು ಆಯ್ಕೆ ಮಾಡಲಾಯಿತು.
ಭಾಷಾ ಗಂಗಾವಳಿ, ಅಬೂಬಕ್ಕರ್ ಅಜಿಲಮೊಗರು, ಜಮಾಲ್ ಉಚ್ಚಿಲ, ಮುಹಮ್ಮದ್ ಮಲೆಬೆಟ್ಟು, ಅಬ್ದುಲ್ ಹಕೀಂ ಜೋಕಟ್ಟೆ, ನಝೀರ್ ಹಾಜಿ ಕಾಶಿಪಟ್ನ, ಅಬ್ದುಲ್ ಅಝೀಝ್ ಮೂಡುತೋಟ, ತಮೀಮ್ ಕೂಳೂರು, ಅಸ್ಗರ್ ಮೂಡಿಗೆರೆ, ಉಮರ್ ಮರವೂರು ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಇಸ್ಮಾಯಿಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ماشاءالله 🇸🇱🇸🇱🇸🇱💐💐🌹🌹