janadhvani

Kannada Online News Paper

ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ಕೊಡಮಾಡುವ 2023 ನೇ ಸಾಲಿನ ಪ್ರತಿಷ್ಠಿತ "ಓ ಖಾಲಿದ್" ಪ್ರಶಸ್ತಿಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಅಸ್ರು ಬಜ್ಪೆ ಅವರಿಗೆ ಪ್ರಧಾನ ಮಾಡಲಾಯಿತು.

ದಮ್ಮಾಮ್: ಧಾರ್ಮಿಕತೆಯಿಂದ ಹಿಂದೆ ಸರಿದಿದ್ದ
ಉತ್ತರ ಕರ್ನಾಟಕದ ಮುಸಲ್ಮಾನರ ಪರಿವರ್ತನೆಗೆ ಕೆಸಿಎಫ್ ಮಾಡಿದ ಸೇವೆ ಅನನ್ಯ. ಕೆಸಿಎಫ್ ದಶವಾರ್ಷಿಕ ಆಚರಿಸುತ್ತಿರುವ ವೇಳೆಗಾಗಲೇ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಆರು ಮದ್ರಸಾಗಳನ್ನು ನಿರ್ಮಿಸಿಕೊಟ್ಟಿದೆ.
ಕೆಲವು‌ ಮದ್ರಸಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೆಸಿಎಫ್ ಒಂದು ದಶ ವರ್ಷದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಹೇಳಿದರು.

ಅವರು, ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಮರ್ಹೂಮ್ ಅಬ್ದುರ್ರಹ್ಮಾನ್ ಕೈರಂಗಳ ವೇದಿಕೆಯಲ್ಲಿ ನಡೆದ “ರಬೀಅ್-23” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಹಮೀದ್ ಕೈರಂಗಳ ವಹಿಸಿದರು.
ಉಸ್ತಾದ್ ಹಿದಾಯತ್ ಲತ್ವೀಫಿ ಕಿರಾಅತ್ ಪಠಿಸಿ,
ಕೆಸಿಎಫ್ ಜುಬೈಲ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸ‌ಅದಿ ಕುಡ್ತಮುಗೇರು ಉದ್ಘಾಟಿಸಿದರು.

ಸಂಘಟನೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ
ಅನಿವಾಸಿಗಳ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಗುಣಕ್ಕೆ ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ಕೊಡಮಾಡುವ 2023 ನೇ ಸಾಲಿನ ಪ್ರತಿಷ್ಠಿತ “ಓ ಖಾಲಿದ್” ಪ್ರಶಸ್ತಿಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಅಸ್ರು ಬಜ್ಪೆ ಅವರಿಗೆ ಪ್ರಧಾನ ಮಾಡಲಾಯಿತು.
ಸಂಘಟನೆಗಾಗಿ ಶಕ್ತಿಮೀರಿ ದುಡಿದ ರಬೀಅ್-23 ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದೀಖ್ ಕನ್ನಂಗಾರ್ ಹಾಗೂ ದಮ್ಮಾಮ್ ಝೋನಲ್ ನಾಯಕ ಹಾರಿಸ್ ಕಾಜೂರು ಅವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ, ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ನಝೀರ್ ಹಾಜಿ ಹಾಗೂ ದಮ್ಮಾಮ್ ಝೋನಲ್ ಅಧ್ಯಕ್ಷ ಉಮರ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಅವರುಗಳಿಗೆ ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ರಾಶಿದ್ ಜೌಹರಿ, ನೌಶಾದ್ ಅಮಾನಿ ಸಂಗಡಿಗರು ಕಾವ್ಯ ಆಲಾಪನೆ ನಡೆಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆಸಿಎಫ್ ಅಂತರಾಷ್ಟ್ರೀಯ ನಾಯಕ ಎನ್ ಎಸ್ ಹಾಜಿ, ಉಮರ್ ಹಾಜಿ ಅಳಕೆಮಜಲು, ಇಸ್ಮಾಯಿಲ್ ಸಖಾಫಿ ಕೊಡಂಗೇರಿ ದಮ್ಮಾಮ್ ಝೋನಲ್ ಅಧ್ಯಕ್ಷ ಉಮರ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ಪ್ರ.ಕಾರ್ಯದರ್ಶಿ ತಮೀಮ್ ಕುಳೂರು, ಕೆಸಿಎಫ್ ಜುಬೈಲ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸ‌ಅದಿ ಕುಡ್ತಮುಗೇರು
ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಶಾಹುಲ್ ಹಮೀದ್ ಅಹ್ಸನಿ, , ಶಂಸುದ್ದೀನ್ ಕೊಡಗು, ಅರೀಫ್ ಉಳ್ಳಾಲ, ಆಸೀಫ್ ಕಾಟಿಪಳ್ಳ, ನಿಸಾರ್ ಗೂಡಿನ ಬಳಿ, ಬಾಷ ಗಂಗಾವಳಿ, ಅಶ್ರಫ್ ನಾವುಂದ, ಚೌಕ ಇಬ್ರಾಹಿಮ್, ಹಾಗೂ ಐಸಿಎಫ್, ಆರ್‌ಎಸ್‌ಸಿ ನಾಯಕರಯಗಳು ಉಪಸ್ಥಿತಿತರಿದ್ದರು.

ಕಾರ್ಯಕ್ರಮವನ್ನು ಇಸ್ಹಾಕ್ ಫಜೀರ್ ಸ್ವಾಗತಿಸಿದರು, ಇಕ್ಬಾಲ್ ಗುಲ್ವಾಡಿ ಧನ್ಯವಾದಗೈದು ನೌಶಾದ್ ತಲಪಾಡಿ ನಿರೂಪಣೆ ಮಾಡಿದರು.

error: Content is protected !! Not allowed copy content from janadhvani.com