ಮಹಬುಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ G-Meet ಕಾರ್ಯಕ್ರಮವು ಸೆ.2 ರಂದು ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಮುಸ್ಲಿಯಾರ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದುಷಾ ಸಖಾಫಿ ಅವರು ದುಆ ನೆರವೇರಿಸಿ,ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು. ಬಹು ಉಮರ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘಟನ ವಿಭಾಗ ಅಧ್ಯಕ್ಷರು ಆಸಂಷಾ ಭಾಷಣ ಮಾಡಿ SSF ಬಗ್ಗೆ ವಿವರಿಸಿದರು,ಬಹು ಬಾದುಷ ಸಖಾಫಿ ಮಾತನಾಡಿ, SSF ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ, ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯನಿಗೆ ಉತ್ತಮ ಜೀವನ ನಡೆಸುವ ಅರಿವು ಮೂಡಿಸಲು ಉತ್ತಮ ಅವಕಾಶವಾಗಿದೆ ಎಂದರು.
SSF ಸಂಘಟನೆಯ ಸದಸ್ಯತ್ವ ಹೊಂದಿರುವ ಮಕ್ಕಳು, ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗೃತಿಗೊಂಡಿರುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದ ಅವರು, ನಾವೆಲ್ಲರೂ ಬಾರತಿಯರು ಸೌಹಾರ್ದ, ಪ್ರೀತಿಯಿಂದ ಜೀವಿಸುವುದು ನಮ್ಮ ಹಕ್ಕಾಗಿದೆ ಎಂದು ವಿವರಿಸಿದರು.
KCF ಅಧ್ಯಕ್ಷರು ಬಹು ಜನಾಬ್ ಹುಸೈನ್ ಎರುಮಾಡ್ ಮಾತನಾಡಿ SSF ಹಾಗೂ KCF ಸದಸ್ಯರಿಗೆ ಇದು ಮಾದರಿ ಸಂಘಟನೆ ಎಂದು ಮನವರಿಕೆ ಮಾಡಿದರು.
ವೇದಿಕೆ ಯಲ್ಲಿ ಪ್ರಚಾರ ಮತ್ತು ಪ್ರಸಾರ ವಿಭಾಗದ ಅಧ್ಯಕ್ಷ ಸಾಹುಲ್ ಹಮೀದ್ ಸಅದಿ ಝುಹ್ರಿ ಜಹರ ಸೆಕ್ಟರ್ ಅಧ್ಯಕ್ಷ ಶಫೀಕ್ ಅಹ್ಸನಿ ಹಾಗೂ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ (INC) ಸದಸ್ಯರು ಆದ ಝಕರಿಯಾ ಅನೇಕಲ್ ಉಪಸ್ಥಿತಿ ಇದ್ದು ಕೊನೆಯಲ್ಲಿ , ಬಹುಮಾನ್ಯ ಮಾಹಿನ್ ಸಖಾಫಿ ಉಸ್ತಾದರು ದುವಾ ಗೈದರು , ಧನ್ಯವಾದವನ್ನು ಆಡಳಿತ ವಿಭಾಗ ಅಧ್ಯಕ್ಷ ಅಬ್ಬಾಸ್ ಬಳಂಜ ನೆರವೇರಿಸಿದರು.
ವರದಿ :ಇಬ್ರಾಹಿಂ ವೇಣೂರು ಕುವೈಟ್