ಉಳ್ಳಾಲ: SჄS ಕಿನ್ಯ ಸರ್ಕಲ್ ಹಮ್ಮಿಕೊಂಡಿದ್ದ ವಿವಿಧ ವರ್ಗದ ಕಾರ್ಮಿಕರ ಸಂಗಮವು ಆಗಸ್ಟ್ 27 ರಂದು ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಿರೀಕ್ಷೆಗೂ ಮಿಗಿಲಾಗಿ ಯಶಸ್ವಿಯಾಗಿ ನಡೆಯಿತು.ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಂಗಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಪರಮಾಂಡ ಹಾಜಿ ಬಿ.ಎಂ ಇಸ್ಮಾಈಲ್ ಉದ್ಘಾಟಿಸಿದರು.
ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಫಾರೂಖ್ ಕಿನ್ಯ ರವರನ್ನು ಈ ಸಂದರ್ಭದಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು,ಗೌರವ ಸ್ವೀಕರಿಸಿ ಮಾತನಾಡಿದ ಫಾರೂಖ್ ಕಿನ್ಯ ರವರು ಸರ್ಕಾರದಿಂದ ಕಾರ್ಮಿಕರಿಗೆ ಲಭಿಸುತ್ತಿರುವ ಸವಲತ್ತುಗಳನ್ನು ವಿವರಿಸಿ,ಕಾರ್ಮಿಕರಿಂದ ಬಂದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿದರು.
SჄS ದ.ಕ ವೆಸ್ಟ್ ಜಿಲ್ಲಾ ಉಪಾಧ್ಯಕ್ಷ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು ಮಾತನಾಡಿ ಪವಿತ್ರ ಇಸ್ಲಾಂ ಕಾರ್ಮಿಕರಿಗೆ ನೀಡಿದ ಮಹತ್ವ ಹಾಗೂ ಸ್ಥಾನಮಾನ, ಗೌರವವನ್ನು ಸವಿಸ್ತಾರವಾಗಿ ಮನಮುಟ್ಟುವಂತೆ ವಿವರಿಸಿದರು.
ಸುನ್ನೀ ಸಂಘಟನೆಗಳ ರಾಜ್ಯ ನಾಯಕ ಕೆ.ಎಚ್ ಇಸ್ಮಾಈಲ್ ಸಅದಿ,SჄS ಸರ್ಕಲ್ ಸೋಶಿಯಲ್ ಸೆಕ್ರೆಟರಿ ಇರ್ಫಾನ್ ಅಬ್ದುಲ್ಲಾ ನೂರಾನಿ, ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಈಲ್ ಫಯಾಝ್ ಕಿನ್ಯ, ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಇರ್ಫಾನ್ ಸಖಾಫಿ ಖುತುಬಿನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ನಾಯಕ ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ,SჄS ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್,ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ,ಇಸಾಬ ಕಾರ್ಯದರ್ಶಿ ಬಶೀರ್ ಲತೀಫಿ ಕುರಿಯ, ಸಾಂತ್ವನ ಕಾರ್ಯದರ್ಶಿ, ಅಯ್ಯೂಬ್ ಖುತುಬಿನಗರ, ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಕೋಶಾಧಿಕಾರಿ ಜಲೀಲ್ ಖುತುಬಿನಗರ ಉಪಸ್ಥಿತರಿದ್ದರು.
ಸರ್ಕಲ್ ದಅವಾ ಕಾರ್ಯದರ್ಶಿ ಫಾರೂಖ್ ಸಖಾಫಿ ಮೀಂಪ್ರಿ ಸ್ವಾಗತಿಸಿ ಉಪಾಧ್ಯಕ್ಷ ಉಸ್ಮಾನ್ ಝುಹ್ರಿ ಕುರಿಯ ಕೊನೆಯಲ್ಲಿ ವಂದಿಸಿದರು.