ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ವಿಟ್ಲ ಝೊನಲ್ಇದರ ವಾರ್ಷಿಕ ಕೌನ್ಸಿಲ್ ಸುನ್ನಿಸೆಂಟರ್ ಪುತ್ತೂರು ಕಚೇರಿಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಎಸ್ ಎಂ ಎ ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ, ಮದರಸ ಆಡಳಿತ ಸಮಿತಿಗಳು ಮದರಸಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಮದರಸ ಮೊಹಲ್ಲಾಗಳ ಸಬಲೀಕರಣಕ್ಕಾಗಿ ಎಸ್ ಎಂ ಎ ಯನ್ನು ಬಲಿಷ್ಠ ಗೊಳಿಸಿವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ವಿಟ್ಲ ಝೂನಲ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಹರಿಯಾಡ್ಕ ನಿರ್ವಹಿಸಿದರು.
ಸಭೆಯ ವೀಕ್ಷಕರಾಗಿ ಎಸ್ ಎಂ ಎ ಜಿಲ್ಲಾ ಸಮಿತಿ ವತಿಯಿಂದ ಅಶ್ರಫ್ ಸಖಾಫಿ ಮಾಡವು ಭಾಗವಹಿಸಿ ವಿಷಯ ಮಂಡನೆ ನಡೆಸಿದರು. ಝೋನಲ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಸ್ ಎಂ ಎ ಜಿಲ್ಲಾ ನಾಯಕರಾದ ಮೊಹಮ್ಮದ್ ಹಾಜಿ ನೆಕ್ಕಿಲಾಡಿ ಎಸ್ ಎಂ ಎ ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಮ್
ಕನ್ಯಾನ ರೀಜನಲ್ ಅಧ್ಯಕ್ಷರಾದ ಇಸ್ಮಾಯಿಲ್ ಎಸ್ ಎಂ ಎ ಝೂನಲ್ ಕೋಶಾಧಿಕಾರಿ ಉಮ್ಮರ್ ವಿಟ್ಲಹಾಗೂ ಕೌನ್ಸಿಲರ್ ಗಳು ಭಾಗವಹಿಸಿದರು