janadhvani

Kannada Online News Paper

ಎಸ್‌ವೈಎಸ್ ಮಾಣಿ ಸರ್ಕಲ್ ನಿಂದ ” ಕಾರ್ಮಿಕ ಸಂಗಮ ” ಕಾರ್ಯಕ್ರಮ

ಮೋಸ ವಂಚನೆ ಮಾಡದೆ ದುಡಿದು ಅಲ್ಲಾಹನ ತೃಪ್ತಿ ಪಡೆಯಿರಿ- ಬಹು | ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ.

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಇದರ ವತಿಯಿಂದ “ಕಾರ್ಮಿಕ ಸಂಗಮ” ಕಾರ್ಯಕ್ರಮವು ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ಗುರುವಾರ ನಡೆಯಿತು.

ಸರ್ಕಲ್ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿದರು,ಅಧ್ಯಕ್ಷ ಹೈದರ್ ಸಖಾಫಿ ಶೇರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಧಾರ್ಮಿಕ ಚೌಕಟ್ಟಿನಲ್ಲೇ ಹಲಾಲ್ ಆದ ವೃತ್ತಿಯನ್ನು ಯಾವುದೇ ಅನ್ಯಾಯ ಮೋಸ ವಂಚನೆ ಕಳ್ಳತನ ಇಲ್ಲದೆ ನಿರ್ವಹಿಸಿ ಅಲ್ಲಾಹನ ತೃಪ್ತಿ ಪಡೆದರೆ ಅದರಲ್ಲಿ ಬರ್ಕತ್ ಅಡಗಿರುತ್ತದೆ ಎಂದು ತರಗತಿ ನಡೆಸಿದ ಕುದುಂಬ್ಲಾಡಿ ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿಯ ಪ್ರೊಫೆಸರ್ ಬಹು:ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿ ಹೇಳಿದರು.

ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ ದುಆ ನಡೆಸಿಕೊಟ್ಟರು,ಮುಖ್ಯ ಅತಿಥಿಯಾಗಿ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ,ಕರ್ನಾಟಕ ಮುಸ್ಲಿಂ ಜಮಾ‌ಅತ್ ನಾಯಕ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಭಾಗವಹಿಸಿದರು, ಕಾರ್ಯಕ್ರಮದಲ್ಲಿ ನೇತಾರರಾದ ರಫೀಕ್ ಮದನಿ ಪಾಟ್ರಕೋಡಿ, ಕಾಸಿಂ ಮುಸ್ಲಿಯಾರ್ ಸೂರ್ಯ, ಮುಸ್ಲಿಂ ಜಮಾ‌ಅತ್ ಅಧ್ಯಕ್ಷರಾದ ಕಾಸಿಂ ಪಾಟ್ರಕೋಡಿ, ಕಾರ್ಯದರ್ಶಿ ಜಬ್ಬಾರ್ ಪಾಟ್ರಕೋಡಿ, ಎಸ್‌ವೈಎಸ್ ಪಾಟ್ರಕೋಡಿ ಅಧ್ಯಕ್ಷ ಶೆರೀಫ್,ಟಿ ಎಸ್ಸೆಸ್ಸೆಫ್ ಪಾಟ್ರಕೋಡಿ ಅಧ್ಯಕ್ಷ ನಿಶಾದ್,ಕಾರ್ಯದರ್ಶಿ ನಿಝಾಮ್ ,ಪ್ರಮುಖರಾದ ಬಶೀರ್ ಪಿ,ಆದಂ ಬನ್ನೂರು,ಮಜೀದ್ ಪಾಟ್ರಕೋಡಿ,ಅಝೀಝ್ ಬಿಎಂಕೆ, ಸುನ್ನೀ ಸೆಂಟರ್ ಕಾರ್ಯದರ್ಶಿ ಸಲೀಂ ಟಿ,ಎಸ್‌ವೈಎಸ್ ಮಾಣಿ ಸರ್ಕಲ್ ಸಾಂತ್ವನ ಕಾರ್ಯದರ್ಶಿ ನಝೀರ್ ಪಾಟ್ರಕೋಡಿ, ಸರ್ಕಲ್ ಇಸಾಬಾ ಕಾರ್ಯದರ್ಶಿ ಸಾಜಿದ್ ಪಾಟ್ರಕೋಡಿ,ಮುಂತಾದ ಹಲವಾರು ಪ್ರಮುಖರು ಭಾಗವಹಿಸಿದರು.

ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಕೋಶಾಧಿಕಾರಿ ಕೆಪಿ ಕಲಂದರ್ ಪಾಟ್ರಕೋಡಿ ಸಹಕರಿಸಿದರು, ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನಡೆಯುವ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರ ಮತ್ತು ಅದರ ಪ್ರಚಾರಾರ್ಥ ಸೆಪ್ಟೆಂಬರ್ 2 ರಂದು ಶನಿವಾರ ಪುತ್ತೂರಿನಲ್ಲಿ ನಡೆಯುವ ಅಲ್ ಅರ್ಖಮಿಯ್ಯ ಕ್ಯಾಂಪ್ ಮತ್ತು ಗೋಲ್ಡನ್ ರ‌್ಯಾಲಿಯ ಪ್ರಚಾರ ನಡೆಸಲಾಯಿತು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com