janadhvani

Kannada Online News Paper

ಕುವೈಟ್: ಕೊಡಗು ಸುನ್ನಿ ವೆಲ್ಪೇರ್ ಅಸೋಸಿಯೇಷನ್- ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ

ಕೊಡಗು ಸುನ್ನಿ ವೆಲ್ಪೇರ್ ಅಸೋಸಿಯೇಷನ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ದಿನಾಂಕ 11/08/23 ಶುಕ್ರವಾರ ಶಪೀಕ್ ಕೊಳಕ್ಕೇರಿ ಅವರ ನಿವಾಸದಲ್ಲಿ ನಡೆದ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಮೀಲಾದ್ ಸಮಿತಿಯ ಚೇರ್ಮ್ಯಾನ್ ಆಗಿ ಬಹು ಹುಸೈನ್ ಮುಸ್ಲಿಯಾರ್ ಏಮ್ಮೆಮಾಡು.
ಜನರಲ್ ಕನ್ವೀನರ್ ಆಗಿ ಇಸ್ಮಾಯಿಲ್ ಅಯ್ಯಂಗೇರಿ, ಫೈನಾನ್ಸಿಯಲ್ ಛೇರ್ಮ್ಯಾನ್ ಆಗಿ ಸಿರಾಜ್ ಸುಂಟಿಕೊಪ್ಪ ಹಾಗೂ ಝಕರಿಯ್ಯ ಮುಸ್ಲಿಯಾರ್ ಎಮ್ಮೆಮಾಡು,
ಊಟೋಪಚಾರದ ವ್ಯವಸ್ಥೆ ಚೇರ್ಮ್ಯಾನ್ ಆಗಿ ಮಾಹಿನ್ ಸಖಾಫಿ ಅಯ್ಯಂಗೇರಿ,
ಕನ್ವೀನರ್ ಆಗಿ ಹುಸೈನ್ ಅಯ್ಯಂಗೇರಿ,
ವಾಹನದ ವ್ಯವಸ್ಥೆ ಚೇರ್ಮ್ಯಾನ್ ಆಗಿ
ಹನೀಫ್ ಚೇರಿಯಪರಂಭ್,
ಕನ್ವೀನರ್ ಆಗಿ ಶಫೀಕ್ ಕೊಳಕ್ಕೇರಿ.

ಸಮಿತಿ ಸದಸ್ಯರುಗಳಾಗಿ ಶರೀಫ್ ಸಅದಿ ಕೊಡ್ಲಿಪೇಟ, ಹಾಫಿಲ್ ಅಶ್ರಫ್ ಮಿಸ್ಬಾಹಿ ಅಯ್ಯಂಗೇರಿ, ಆಝೀಝ್ ಸಅದಿ ಅಯ್ಯಂಗೇರಿ. ಅಬ್ದುಲ್ ಖಾದರ್ ಎಮ್ಮೆಮಾಡು ಅಲಿ ಕೊಟ್ಟಮುಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಮಿತಿ ಪ್ರ.ಕಾರ್ಯದರ್ಶಿ ರಹೀಮ್ ಕೊಳಕ್ಕೇರಿ ಧನ್ಯವಾದ ಸಲ್ಲಿಸಿದರು.