ವಿಟ್ಲ .ದಾರುನ್ನಜಾತ್ ಎಜುಕೇಶನಲ್
ಸೆಂಟರ್ ಟಿಪ್ಪುನಗರ ವಿದ್ಯಾ ಸಂಸ್ಥೆಗೆ ಶೈಖುನಾ ಸಯ್ಯದ್ ಅಲಿ ಬಾಫಕಿ ತಂಙಳ್ ಇವತ್ತು ಭೇಟಿ ನೀಡಿದರು. ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆಯು ಸೆಪ್ಟಂಬರ್ 17-2023 ರಂದು ನಡೆಸುವುದಾಗಿ ಘೋಷಣೆ ಮಾಡಿ ಪ್ರಾರ್ಥನೆ ನಿರ್ವಹಿಸಿದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಮೂದುಲ್ ಫೈಝಿ ( ವಾಲೆಮುಂಡೋವ್ ಉಸ್ತಾದ್), ಅಸಾಸ್ ಎಜುಕೇಶನಲ್ ಸೆಂಟರ್ ಅಧ್ಯಕ್ಷರಾದ ಅಶ್ರಫ್ ಸಅದಿ ಮಲ್ಲೂರು , ದಾರುನ್ನಜಾತ್ ದುಬೈ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ, ಸಂಸ್ಥೆಯ ಮುದರ್ರಿಸ್ ಶಮೀಮ್ ತಂಙಳ್ ,ಸಂಸ್ಥೆಯ ಕೋಶಾಧಿಕಾರಿ ಡಾ ಹಸೈನಾರ್ ಹಾಫೀಲ್ ಶರೀಫ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮೆನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿದರು.