ಕಾರಂದೂರು: ಮಲೇಶ್ಯಾ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಮಅಲ್ ಹಿಜ್ರಾ ಇಂಟರ್‌ನ್ಯಾಷನಲ್ ಅವಾರ್ಡ್’ ಪುರಸ್ಕೃತರಾದ ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇಂಟರ್ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮರ್ಕಝ್ ಸಭಾಂಗಣದಲ್ಲಿ ಮೆಮೆಂಟೋ ನೀಡಿ ಗೌರವಿಸಲಾಯಿತು.
ಕೆಸಿಎಫ್ ನೇತೃತ್ವದಲ್ಲಿ ನಡೆಯುವ ವಿವಿಧ ಧಾರ್ಮಿಕ ಶೈಕ್ಷಣಿಕ ಸಾಂತ್ವನ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತಾದರು ಪ್ರಾರ್ಥಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆ.ಸಿ.ಎಫ್ ಫೈನಾನ್ಸಿಯಲ್ ಕಂಟ್ರೋಲರ್ ಅಲಿ ಮುಸ್ಲಿಯಾರ್ ಬಹ್ರೇನ್, ವೆಲ್ಫೇರ್ ಅಧ್ಯಕ್ಷ ರೈಸ್ಕೋ ಅಬೂಬಕರ್ ಹಾಜಿ, ವೆಲ್ಪೇರ್ ಕಾರ್ಯದರ್ಶಿ ಇಕ್ಬಾಲ್ ಬರಕ, ಕೆ.ಸಿ.ಎಫ್ ನೇತಾರರಾದ ನಝೀರ್ ಹಾಜಿ ಕಾಶಿಪಟ್ನ, ಬ್ರೈಟ್ ಇಬ್ರಾಹಿಂ ಹಾಜಿ ಮೊದಲಾದವರು ಉಪಸ್ಥಿತರಿದ್ದರು.