ಮಂಗಳೂರು:ಧಾರಾಕಾರ ಮಳೆಯಿಂದಾಗಿ ಪ್ರಕೃತಿ ದುರಂತ ಹಾಗೂ ಇತರ ಅನಾಹುತಗಳ ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕಾಗಿ ಮುಸ್ಲಿಂ ಜಮಾಅತ್ ಮತ್ತು SჄS ಕಿನ್ಯ ಸರ್ಕಲ್ ವ್ಯಾಪ್ತಿಯ ಏಳು ಭಾಗಗಳಲ್ಲಿ “ಸದಾ ಸೇವೆಯ ಸಾಂತ್ವನ ತಂಡ” ವನ್ನು ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಈ ತಂಡದ ಮುಖ್ಯ ಅಮೀರರಾಗಿ ಕುರಿಯ ಉಸ್ಮಾನ್ ಝುಹ್ರಿ ರವರನ್ನು ಆಯ್ಕೆ ಮಾಡಲಾಗಿದೆ, ಸಯ್ಯದ್ ಅಲವಿ ತಂಙಳ್ ಮೀಂಪ್ರಿ ರವರ ದುಆದೂಂದಿಗೆ ಪ್ರಾರಂಭಗೊಂಡ ಸಭೆಯನ್ನು ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ (ವೆಸ್ಟ್) ಕಾರ್ಯದರ್ಶಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ ಉದ್ಘಾಟಿಸಿದರು.
ಏಳು ಭಾಗಗಳ ಸಾಂತ್ವನ ತಂಡದ ಅಮೀರ್ ಗಳನ್ನು ಆರಿಸಿ ಸದಾ ಸೇವೆಗೆ ಸಿದ್ದರಾಗಲು ಸೂಚನೆ ನೀಡಲಾಗಿದೆ.
ಖುತುಬಿನಗರ ಮೀನಾದಿಗೆ ಪರಮಾಂಡ ಹಾಜಿ ಬಿ.ಎಂ ಇಸ್ಮಾಈಲ್, ಮೀಂಪ್ರಿಗೆ ಎಂಕೆಎಂ ಇಸ್ಮಾಈಲ್, ರಹಮತ್ ನಗರ ಭಾಗಕ್ಕೆ ಕೆ.ಎಂ ಅಬ್ದುಲ್ ಖಾದರ್ (ಪದಿಯಾರೆ ಸೇಕಬ್ಬ) ಕುರಿಯ ಪ್ರದೇಶಕ್ಕೆ ಆಲಿಕುಂಞಿ ಬಾಕಿಮಾರ್, ಬೆಳರಿಂಗೆ ಭಾಗಕ್ಕೆ ಅಬ್ದುಲ್ ಅಝೀಝ್ ಸಾಗ್, ಉಕ್ಕುಡಕ್ಕೆ ಅನ್ಸಾರ್ ಉಕ್ಕಡ, ಬದ್ರಿಯಾನಗರ ಭಾಗಕ್ಕೆ ಕೆ.ಎಚ್ ಮೂಸಕುಂಞಿ ರವರುಗಳನ್ನು ಅಮೀರರಾಗಿ ಆಯ್ಕೆ ಮಾಡಲಾಯಿತು.
ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್,SჄS ಕಿನ್ಯ ಸರ್ಕಲ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ,ಮುಸ್ಲಿಂ ಜಮಾಅತ್ ಬೆಳರಿಂಗೆ ಅಧ್ಯಕ್ಷ ಅಬ್ಬಾಸ್ ಹಾಜಿ ಎಲಿಮಲೆ ಸಭೆಯಲ್ಲಿ ಉಪಸ್ಥಿತರಿದ್ದರು.