janadhvani

Kannada Online News Paper

ನಂದಾವರ ಭೂಕುಸಿತ ದುರಂತ- ಪರಿಹಾರ ನೀಡುವಂತೆ ವಕ್ಫ್ ಅಧ್ಯಕ್ಷರಿಂದ ಮುಖ್ಯಮಂತ್ರಿ ಗೆ ಮನವಿ

ಬೆಂಗಳೂರು: ಕರಾವಳಿಯಾದ್ಯಂತ ವ್ಯಾಪಕವಾಗಿ ಮಳೆ ಬರುತ್ತಿದ್ದು, ಮಂಗಳೂರಿನ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರದಲ್ಲಿ ಇವತ್ತು ಮುಂಜಾನೆ ನಡೆದ ಭೂಕುಸಿತ ದುರಂತದಲ್ಲಿ ಝರೀನಾ ಎಂಬ ಮಹಿಳೆಯು ನಿಧನ ಹೊಂದಿದ್ದು ಹಾಗೂ ಅವರ ಪತಿ ಹಾಗೂ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದುರ್ಘಟನೆಗೆ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು ಸಂತಾಪ ಸೂಚಿಸಿದ್ದು, ಮಹಿಳೆಗೆ ಪರಿಹಾರ ಹಾಗೂ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚಕ್ಕಾಗಿ ಸಹಾಯ ಧನ ನೀಡುವಂತೆ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯರವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com