janadhvani

Kannada Online News Paper

ಎಪಿ ಉಸ್ತಾದರ ಬೇಡಿಕೆಗೆ ಸ್ಪಂದನೆ- ಇಂದಿನಿಂದ ಕೋಝಿಕ್ಕೋಡ್‌ನಲ್ಲಿ ಸೌದಿ ವಿಸಾ ಸ್ಟಾಂಪಿಂಗ್ ಕೇಂದ್ರ ಕಾರ್ಯಾರಂಭ

ಮಲಬಾರ್ ನಲ್ಲೂ  ವಿಎಫ್ಎಸ್ ಕೇಂದ್ರವನ್ನು ಸ್ಥಾಪಿಸುವಂತೆ ಕೋರಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಸೌದಿ ಪ್ರಧಾನಿ ಮತ್ತು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪತ್ರ ಬರೆದಿದ್ದರು.

ಕೋಝಿಕ್ಕೋಡ್,ಜುಲೈ.6|ಸೌದಿ ವೀಸಾ ಸ್ಟಾಂಪಿಂಗ್ ಸೆಂಟರ್ ಇಂದಿನಿಂದ ಕೋಝಿಕ್ಕೋಡ್‌ನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಸೌದಿ ವೀಸಾ ಸ್ಟಾಂಪಿಂಗ್ ಏಜೆನ್ಸಿಯಾದ VFS ಗ್ಲೋಬಲ್ ತನ್ನ ಕೋಝಿಕ್ಕೋಡ್ ಕೇಂದ್ರದಿಂದ ನೇಮಕಾತಿಗಳನ್ನು ನೀಡಲು ಪ್ರಾರಂಭಿಸಿದೆ. ಇದರೊಂದಿಗೆ ಸೌದಿ ವಲಸಿಗರು ವೀಸಾ ಸ್ಟಾಂಪಿಂಗ್‌ಗಾಗಿ ಎದುರಿಸುತ್ತಿದ್ದ ಬಿಕ್ಕಟ್ಟು ನಿವಾರಣೆಯಾಗಿದೆ. ಈ ಹಿಂದೆ ಕೇರಳದಲ್ಲಿ ಕೊಚ್ಚಿಯಲ್ಲಿ ಮಾತ್ರ ವೀಸಾ ಸ್ಟಾಂಪಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು.

ಕೇರಳದ ಎಲ್ಲಾ ಜನರಿಗೆ ಸೌದಿ ವೀಸಾಗಳನ್ನು ಪಡೆಯಲು ಕೊಚ್ಚಿ ಕೇಂದ್ರವನ್ನು ಅವಲಂಬಿಸಬೇಕಾದ ತೊಂದರೆಗಳನ್ನು ಸೂಚಿಸಿ ಮತ್ತು ಅದಕ್ಕೆ ಪರಿಹಾರವಾಗಿ ಮಲಬಾರ್ ನಲ್ಲೂ ವಿಎಫ್ಎಸ್ ಕೇಂದ್ರವನ್ನು ಸ್ಥಾಪಿಸುವಂತೆ ಕೋರಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಸೌದಿ ಪ್ರಧಾನಿ ಮತ್ತು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪತ್ರ ಬರೆದಿದ್ದರು.

ಭಾರತದಲ್ಲಿನ ಸೌದಿ ರಾಯಭಾರಿ ಮೂಲಕ ಕಳುಹಿಸಲಾದ ಪತ್ರಕ್ಕೆ ಸ್ಪಂದಿಸಿ, ಅಧಿಕಾರಿಗಳು ಕೋಝಿಕ್ಕೋಡ್‌ನಲ್ಲಿ ವಿಎಫ್‌ಎಸ್ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಸೌದಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಕೋಝಿಕೋಡ್ VFS ಸೆಂಟರ್ ಅನ್ನು ಜೂನ್ 22 ರಂದು vc.tasheer.com ನಲ್ಲಿ ಪಟ್ಟಿ ಮಾಡಲಾಗಿತ್ತು. ಆದರೆ ಈ ಕೇಂದ್ರದ ಮೂಲಕ ಸ್ಲಾಟ್ ಬುಕ್ಕಿಂಗ್ ಆರಂಭವಾಗಿರಲಿಲ್ಲ. ಇಂದು (ಗುರುವಾರ) ಬೆಳಗ್ಗೆ 12 ಗಂಟೆಗೆ ಬುಕ್ಕಿಂಗ್ ಆರಂಭವಾಗಿದೆ. ಈಗ ಬುಕ್ ಮಾಡುವವರಿಗೆ ಜುಲೈ 10 ರಂದು ಅಪಾಯಿಂಟ್‌ಮೆಂಟ್ ನೀಡಲಾಗುತ್ತದೆ.

VFS ಕೇಂದ್ರವನ್ನು ಸೆಂಟ್ರಲ್ ಆರ್ಕೇಡ್, ಮಿನಿ ಬೈಪಾಸ್ ರಸ್ತೆ, ಪುತ್ಯಾರ, ಕೋಝಿಕ್ಕೋಡ್ ನಲ್ಲಿ ತೆರೆಯಲಾಗಿದೆ. ಕೋಝಿಕ್ಕೋಡ್ ಕೇಂದ್ರ ಮತ್ತು ಕೊಚ್ಚಿ ಕೇಂದ್ರವು ಸೌದಿ ಅರೇಬಿಯಾದ ಮುಂಬೈ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸೌದಿ ಅರೇಬಿಯಾಕ್ಕೆ ಕೆಲಸದ ವೀಸಾಗಳನ್ನು ಸ್ಟಾಂಪಿಂಗ್ ಮಾಡಲು VFS ಅಥವಾ ವೀಸಾ ಫೆಸಿಲಿಟೇಶನ್ ಸೆಂಟರ್‌ಗಳಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸುವ ಪ್ರಸ್ತಾಪದ ನಂತರ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದು ಕಷ್ಟಕರವಾಗಿದೆ.ಕಳೆದ ಮೇ 1 ರಿಂದ ಕುಟುಂಬ ಮತ್ತು ಭೇಟಿ ವೀಸಾಗಳನ್ನು ವಿಎಫ್‌ಎಸ್ ಮೂಲಕ ನೀಡಲು ಆರಂಭಿಸಿದ ನಂತರ, ಕೆಲಸದ ವೀಸಾಗಳಲ್ಲಿಯೂ ಈ ಸುಧಾರಣೆಯನ್ನು ಜಾರಿಗೆ ತರಲು ಸೌದಿ ಅರೇಬಿಯಾವು ಸೂಚನೆಗಳನ್ನು ನೀಡಿದೆ.

error: Content is protected !! Not allowed copy content from janadhvani.com