janadhvani

Kannada Online News Paper

ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಶಾಫಿ ಸಅದಿ ರಾಜೀನಾಮೆ

ಮುಂದಿನ ಅಧ್ಯಕ್ಷರ ಆಯ್ಕೆ ತನಕ ಶಾಫಿ ಸಅದಿಯವರು ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ

ಬೆಂಗಳೂರು: ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷರಾಗಿರುವ ಎನ್.ಕೆ.ಎಂ ಶಾಫಿ ಸಅದಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ಯೂಸುಫ್ ಬೆಂಗಳೂರು ರವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ವಕ್ಫ್ ಚುನಾವಣೆಯಲ್ಲಿ ಶಾಫಿ ಸಅದಿಯವರು ಆಯ್ಕೆ ಯಾಗಿದ್ದರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾರ ಸಾನಿಧ್ಯದಲ್ಲಿ ಒಂದುವರೆ ವರ್ಷದ ಅಧಿಕಾರ ಹಂಚಿಕೆಯ ಸಂಧಾನದೊಂದಿಗೆ ಅಧಿಕಾರ ಸ್ವೀಕರಿಸಿದ್ದ ಉಸ್ತಾದರು ತನ್ನ ಅವಧಿ ಪೂರ್ಣಗೊಳಿಸಿ ರಾಜಿನಾಮೆ ನೀಡಿದ್ದು,ಮುಂದಿನ ಒಂದೂವರೆ ವರ್ಷ ರಾಜ್ಯ ವಕ್ಫ್ ಮಂಡಳಿ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಒಂದು ತಿಂಗಳಲ್ಲಿ ಸರ್ಕಾರ ಮಗದೊಮ್ಮೆ ಚುನಾವಣೆ ನಡೆಸಿ, ಒಪ್ಪಂದದಂತೆ ಮುತುವಲ್ಲಿ ವಿಭಾಗದಿಂದ ವಕ್ಫ್ ಸದಸ್ಯರಾಗಿರುವ ಅನ್ವರ್ ಚಿತ್ರದುರ್ಗ ಹಾಗೂ ಬಾರ್ ಕೌನ್ಸಿಲ್ ನಿಂದ ಆಯ್ಕೆಯಾಗಿರುವ ಅಡ್ವೊಕೇಟ್ ರಿಯಾಝ್ ಖಾನ್ ವಕ್ಫ್ ಚುನವಾಣಾ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಮುಂದಿನ ಅಧ್ಯಕ್ಷರ ಆಯ್ಕೆ ತನಕ ಶಾಫಿ ಸಅದಿಯವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.

ರಾಜ್ಯದ ವಖ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವನ್ನು ಓರ್ವ ಆಲಿಮ್ ಅಲಂಕರಿಸಿದ ಹೆಗ್ಗಳಿಕೆಯು ಶಾಫಿ ಸಅದಿಯರಿಗೆ ಸಲ್ಲುತ್ತದೆ. ರಾಜ್ಯಾದ್ಯಂತ ವಕ್ಫ್ ಸಂಸ್ಥೆಯನ್ನು ಗುರುತಿಸುವಂತೆ ಮಾಡಿ. ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

error: Content is protected !! Not allowed copy content from janadhvani.com