janadhvani

Kannada Online News Paper

ವಿವಿಧ ಜಿಲ್ಲೆಗಳಲ್ಲಿ ವಿಪರೀತ ಮಳೆ: ಜನರ ನೆರವಿಗೆ ಸರ್ಕಾರ ಸಿದ್ಧವಾಗಿರಲಿ- ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ

ಸರ್ಕಾರವು ತನ್ನ ವಿಪತ್ತು ನಿರ್ವಹಣಾ ವಿಭಾಗವನ್ನು ಸದಾ ಸನ್ನದ್ಧ ರೀತಿಯಲ್ಲಿ ಇಡಬೇಕು.

ಮಂಗಳೂರು ; ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ವಿಪರೀತ ಗಾಳಿ ಮಳೆಯಾಗುತ್ತಿದೆ. ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಆದುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆಯಲ್ಲಿರ ಬೇಕಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಮಳೆಯ ನಿಮಿತ್ತ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ಸರ್ಕಾರವು ತನ್ನ ವಿಪತ್ತು ನಿರ್ವಹಣಾ ವಿಭಾಗವನ್ನು ಸದಾ ಸನ್ನದ್ಧ ರೀತಿಯಲ್ಲಿ ಇಡಬೇಕು.

ಅದರೊಂದಿಗೆ ಸಂಕಷ್ಟಕ್ಕೀಡಾದವರ ನೆರವಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಘಟಕಗಳು ಹಾಗೂ ಸಹ ಸಂಘಟನೆಗಳು ಆಯಾ ವ್ಯಾಪ್ತಿಯ ನಾಯಕರು, ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾದ ಡಾ: ಮುಹಮ್ಮದ್ ಫಾಝಿಲ್ ರಝ್ವಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com