ರಿಯಾದ್: ಹಬ್ಬಾಚರಣೆಗಳ ಜೊತೆಗೆ, ಕರುಣೆ ಮತ್ತು ದಾನ ಕಾರ್ಯಗಳು ಅರಬರ ರೂಢಿಯಾಗಿದೆ. ಇಂತಹ ಸತ್ಕಾರ್ಯಗಳಲ್ಲಿ ಆಳುವವರೂ ಸಾಮಾನ್ಯರೂ ಪೈಪೋಟಿ ನಡೆಸುತ್ತಾರೆ. ಸೌದಿ ಅರೇಬಿಯಾದಿಂದ ಇಂಥದ್ದೊಂದು ಸುದ್ದಿ ಹೊರಬಿದ್ದಿದೆ.
ಸಾಲಿಂ ಬಿನ್ ಫದ್ಹಾನ್ ಅಲ್ ರಶೀದಿ ಎಂಬ ಸೌದಿ ಉದ್ಯಮಿಯೊಬ್ಬರು ತನ್ನ ಸಾಮಾನ್ಯ ಗ್ರಾಹಕರಿಗೆ ಈದ್ ಉಡುಗೊರೆಯಾಗಿ ನೀಡಿದ್ದನ್ನು ಕೇಳಿದರೆ ನಿಜಕ್ಕೂ ಅಚ್ಚರಿ ಮೂಡಲಿದೆ.
ತನ್ನ ಗ್ರಾಹಕರು ನೀಡಬೇಕಾದ ವಹಿವಾಟುಗಳನ್ನು ದಾಖಲಿಸಿದ್ದ ಪುಸ್ತಕವನ್ನು ಸಾಲಿಂ ಸುಟ್ಟು ಹಾಕಿದ್ದು, ಎಲ್ಲರನ್ನೂ ಆಶ್ಚರ್ಯಪಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಮೆಂಟ್‌ಗಳು ಮತ್ತು ಶೇರ್‌ಗಳ ಮಹಾಪೂರವೇ ಹರಿದುಬಂದಿದೆ.
ಈ ಪವಿತ್ರ ದಿನದಂದು ತನ್ನ ಎಲ್ಲಾ ಸಾಲಗಾರರನ್ನು ಕ್ಷಮಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಆ ಬಳಿಕ ಹಣ ಪಡೆದವರ ಹೆಸರು ಹಾಗೂ ಇತರೆ ಮಾಹಿತಿಗಳನ್ನು ದಾಖಲಿಸಿದ್ದ ಎಲ್ಲ ಖಾತೆ ಪುಸ್ತಕಗಳನ್ನು ಸುಟ್ಟು ಹಾಕಿದ್ದಾರೆ.
ಪವಿತ್ರ ಹಜ್ ತಿಂಗಳಾದ ದುಲ್-ಹಿಜ್ಜಾದ ಒಳಿತಿಗಾಗಿ ತನ್ನ ಎಲ್ಲಾ ಸಾಲಗಾರರನ್ನು ಕ್ಷಮಿಸಿದ್ದೇನೆ ಎಂದು ಅವನು ಪುನರಾವರ್ತಿಸುತ್ತಾರೆ.
رجل أعمال يحرق جميع دفاتر المطالبات
ويعفو عن جميع الديون والسلف لوجه الله تعالى
اللهم تقبل منه واجعلها من أعماله الصالحة في هذه الايام العشر pic.twitter.com/AztDY8WVME
— أحمد الرحيلي (@alruhaily_a) June 24, 2023