ಮಂಗಳೂರು: ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಂಗಳೂರಿನ ‘ ಸಂತರು ‘ ಮತ್ತು ಧಾರ್ಮಿಕ ಮುಖಂಡರು ಇತ್ತೀಚೆಗೆ ಸಭೆ ಸೇರಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿರುದ್ಧ ಗೋಹತ್ಯೆ ಮತ್ತು ಮತಾಂತರ ಕಾಯ್ದೆಯ ವಿಷಯ ಪ್ರಸ್ತಾಪಿಸಿ ರಾಜ್ಯಪಾಲರು ಮತ್ತು ಪ್ರಧಾನಿ ಮೋದಿ ಬಳಿ ನಿಯೋಗ ತೆರಳುವುದಾಗಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಬಾರದು, ಮತಾಂತರ ನಿಷೇಧ ಕಾಯ್ದೆ ಪುನರ್ ಸ್ಥಾಪಿಸಬೇಕು ತಪ್ಪಿದಲ್ಲಿ ಹೋರಾಟ ಮಾಡುತ್ತೇವೆ ಎಂಬಿತ್ಯಾದಿಯಾಗಿ ವಿಶ್ವ ಹಿಂದೂ ಪರಿಷತ್ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನಲ್ಲಿ ಸಭೆ ಸೇರಿದ ಸಂತರು ಕೇಂದ್ರ ಸರಕಾರದ ಮುಂದೆ ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುವ ಗೋಮಾಂಸ ವ್ಯವಹಾರವನ್ನು ಸ್ಥಗಿತ ಗೊಳಿಸುವ ಬೇಡಿಕೆಯನ್ನು ಮಾಡಬೇಕಿದೆ. ಒಂದು ವೇಳೆ ಮಂಗಳೂರಿನ ಸಂತರು ಗೋಮಾಂಸ ರಫ್ತು ನಿಷೇಧ ಬೇಡಿಕೆ ಮುಂದಿಡುವುದಾದರೆ ಮುಸ್ಲಿಮರು ನಿಯೋಗದಲ್ಲಿ ಭಾಗಿಯಾಗಲು ಸಿದ್ಧರಿದ್ದಾರೆ. ಮಂಗಳೂರಿನ ಸಂತರು ಈ ಬೇಡಿಕೆ ಮುಂದಿಡಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
.