ಕುವೈತ್ ಸಿಟಿ: ಸ್ವೀಡನ್ ನ ರಾಜಧಾನಿ ಸ್ಟಾಕ್ ಹೋಮ್ ನ ಮಸೀದಿಯ ಮುಂದೆ ಪವಿತ್ರ ಖುರ್‌ಆನ್ ಪ್ರತಿಯನ್ನು ಸುಟ್ಟು ಹಾಕಿರುವುದನ್ನು ಕುವೈತ್ ತೀವ್ರವಾಗಿ ಖಂಡಿಸಿದೆ.
ಇಂತಹ ನಡವಳಿಕೆಯು ಉಗ್ರವಾದ ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ ಮತ್ತು ಧರ್ಮಗಳು ಮತ್ತು ವಿಶ್ವಾಸಗಳನ್ನು ಅವಮಾನಿಸುತ್ತದೆ ಎಂದು ಕುವೈತ್‌ನ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ರೀತಿಯ ಮುಸ್ಲಿಂ ವಿರೋಧಿ ಕೃತ್ಯಗಳನ್ನು ಈ ಹಿಂದೆಯೂ ಬಲಪಂಥೀಯ ಜನಾಂಗೀಯ ಗುಂಪುಗಳು ನಡೆಸಿವೆ. ಹಿಂಸಾಚಾರ ಮತ್ತು ದ್ವೇಷವನ್ನು ಪ್ರಚೋದಿಸುವ ಇಂತಹ ಗಂಭೀರ ನಡವಳಿಕೆಯನ್ನು ಅಪರಾಧೀಕರಿಸಲು ಮತ್ತು ಶಿಕ್ಷಿಸಲು ಅಂತರರಾಷ್ಟ್ರೀಯ ಸಮುದಾಯದಿಂದ ಬಲವಾದ ನಿಲುವು ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.