janadhvani

Kannada Online News Paper

ಬೆಂಗಳೂರಿನಲ್ಲಿ ನಲ್ಲಿ SSF ಕ್ಯಾಂಪಸ್ ಗೋಲ್ಡನ್ ವಿಚಾರ ಸಂಕಿರಣ

ಬೆಂಗಳೂರು -25-06-2023:
ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ SSF ಗೋಲ್ಡನ್ ಫಿಫ್ಟಿ ವಿದ್ಯಾರ್ಥಿ ಸಮಾವೇಶದ ಪ್ರಚಾರರ್ಥವಾಗಿ Golden symposium ವಿಚಾರ ಸಂಕಿರಣವು ಜೂನ್ 25 ಆದಿತ್ಯವಾರ ಅಲ್ ಅಮೀನ್ ಕಾಲೇಜು ಬೆಂಗಳೂರಿನಲ್ಲಿ ನಡೆಯಿತು .

ಬೆಂಗಳೂರಿನ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಏರ್ಪಡಿಸಿದ್ದ ಏಕದಿನ ವಿಚಾರ ಸಂಕಿರಣದಲ್ಲಿ ಖ್ಯಾತ ಭಾಷಣಗಾರ ಅನಸ್ ಅಮಾನಿ ಉಸ್ತಾದ್ ಪುಷ್ಪಗಿರಿ ತರಗತಿಯನ್ನು ನಡೆಸಿಕೊಟ್ಟರು.
ಬೆಂಗಳೂರಿನ ವಿವಿಧ ಕಡೆಗಳಿಂದ ನೂರಾರು ಕ್ಯಾಂಪಸ್ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಆಗಮಿಸಿ ತರಗತಿಯ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಹನೀಫ್ ಅಸ್ಹದಿ ಸ್ವಾಗತಿಸಿ,ನಿಝಾರ್ ಖಾದ್ರಿ ಧನ್ಯವಾದವಿತ್ತರು.

error: Content is protected !! Not allowed copy content from janadhvani.com