janadhvani

Kannada Online News Paper

ಎಸ್ಸೆಸ್ಸೆಫ್ : ‘ಗೋಲ್ಡನ್ ಸಫಾರಿ’ ಎರಡನೇ ಹಂತದ ಯಾತ್ರೆಗೆ ನಾಳೆ ಬೀದರ್‌ನಲ್ಲಿ ಚಾಲನೆ

ಬಿಜಾಪುರ, ರಾಯಚೂರು, ಗಂಗಾವತಿ, ಬಾಗಲಕೋಟೆ, ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ

ಬೀದರ್ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಐವತ್ತನೇ ವರ್ಷಾಚರಣೆ ಪ್ರಯುಕ್ತ ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರಾರ್ಥ ಹಮ್ಮಿಕೊಂಡಿರುವ ಗೋಲ್ಡನ್ ಸಫಾರಿ ಯಾತ್ರೆಯ ಮೊದಲನೇ ಹಂತ ಬೆಂಗಳೂರಿನಿಂದ ಮಂಗಳೂರು ವರೆಗೆ ಈಗಾಗಲೇ ಸಮಾಪ್ತಿಗೊಂಡಿದೆ.‌

ಎರಡನೇ ಹಂತದ ಯಾತ್ರೆ ಜೂನ್ 21 ನಾಳೆ ಬೀದರ್ ಪಟ್ಟಣದ ಅಬುಲ್ ಫೈಲ್ ರಹ್ಮಹುಲ್ಲಾಹ್ ರವರ ದರ್ಬಾರಿನಿಂದ ಆರಂಭಗೊಳ್ಳಲಿದ್ದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ನೇತೃತ್ವ ನೀಡಲಿದ್ದಾರೆ.
ನಾಳೆ ಸಂಜೆ ಗುಲ್ಬರ್ಗ ಶೈಖ್ ರೋಝಾದಲ್ಲಿ ಹಾಗೂ ರಾತ್ರಿ ಯಾದಗಿರಿ ಪಟ್ಟಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಬಳಿಕ ಬಿಜಾಪುರ, ರಾಯಚೂರು, ಗಂಗಾವತಿ, ಬಾಗಲಕೋಟೆ, ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಜೂನ್ 26ರಂದು ಭಟ್ಕಳದಲ್ಲಿ ಸಮಾರೋಪಗೊಳ್ಳಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆಎಂ ಮುಸ್ತಫಾ ನಈಮಿ ಹಾವೇರಿ, ಅನ್ವರ್ ಅಸ್‌ಅದಿ, ಜುನೈದ್ ಸಖಾಫಿ ಚಿತ್ರದುರ್ಗ, ಮುಜೀಬ್ ಕೊಂಡಂಗೇರಿ, ಅಶ್ರಫ್ ಸಖಾಫಿ ಹರಿಹರ, ಅಬ್ದುಲ್ ಹಮೀದ್ ತಲಪಾಡಿ ಹಾಗೂ ಇರ್ಶಾದ್ ಹಾಜಿ ಗೂಡಿನಬಳಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

error: Content is protected !! Not allowed copy content from janadhvani.com