janadhvani

Kannada Online News Paper

ಸೌದಿಯಲ್ಲಿ ‘ದುಲ್ ಹಜ್’ ಚಂದ್ರ ದರ್ಶನ: ಜೂನ್ 28ಕ್ಕೆ ಈದುಲ್ ಅದ್’ಹಾ ಆಚರಣೆ

ಜೂನ್ 27ರಂದು ಅರಫಾ ದಿನ

ರಿಯಾದ್,ಜೂನ್.18: ಇಂದು ರಾತ್ರಿ ಸೌದಿ ಅರೇಬಿಯಾದಲ್ಲಿ ದುಲ್ ಹಜ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜೂನ್ 19ರಿಂದ ದುಲ್ ಹಜ್ ತಿಂಗಳು ಪ್ರಾರಂಭವಾಗಲಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಪ್ರಕಟಿಸಿದೆ.

ಇಸ್ಲಾಮಿಕ್ ಕ್ಯಾಲೆಂಡರ್ ನ ಕೊನೆಯ ತಿಂಗಳಾದ ದುಲ್ ಹಜ್ ಸೋಮವಾರದಿಂದ ಆರಂಭಗೊಳ್ಳಲಿದೆ. ಇಸ್ಲಾಮಿಕ್ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಪವಿತ್ರ ಹಜ್ ಕರ್ಮದ ಭಾಗವಾಗಿರುವ ಅರಫಾ ದಿನವನ್ನು ದುಲ್ ಹಜ್ 9 (ಜೂನ್ 27) ರಂದು ಆಚರಿಸಲಾಗುತ್ತಿದೆ, ಅಂದು ಹಜ್ಜಾಜ್‌ಗಳು ಅರಫಾ ಬೆಟ್ಟದಲ್ಲಿ ಸಂಗಮಿಸಲಿದ್ದು, ವಿಶ್ವದಲ್ಲೇ ಅತಿ ದೊಡ್ಡ ಸಂಗಮವಾಗಿದೆ ಅರಫಾ ಸಂಗಮ. ಜೂನ್ 28 ಬುಧವಾರ ಈದುಲ್ ಅದ್’ಹಾ ಅಥವಾ ಬಕ್ರೀದ್ ಆಚರಿಸಲಾಗುತ್ತದೆ.

ಯುಎಇ, ಬಹ್ರೇನ್, ಖತ್ತರ್, ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಜೂನ್ 28 ರಂದು ಈದುಲ್ ಅದ್’ಹಾ ಆಚರಿಸಲಾಗುತ್ತದೆ.