ರಿಯಾದ್: ಇ-ವೀಸಾ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಪ್ರಕ್ರಿಯೆ ಕಷ್ಟಕರವಾಗುತ್ತಿದೆ ಎಂದು ವರದಿಯಾಗಿದೆ.
ವಿಸಿಟಿಂಗ್, ಟೂರಿಸ್ಟ್ ಮತ್ತು ಬಿಸಿನೆಸ್ ವೀಸಾಗಳಲ್ಲಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವವರಿಗೆ ಬೆರಳಚ್ಚು ಸೇರಿದಂತೆ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸುವ ಅವಶ್ಯಕತೆಯು ಸಾವಿರಾರು ಅರ್ಜಿದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ವೀಸಾ ಫೆಸಿಲಿಟೇಶನ್ ಸರ್ವೀಸ್ (ವಿಎಫ್ ಎಸ್) ಕಚೇರಿಗಳಲ್ಲಿ ನೇರವಾಗಿ ಹಾಜರಾಗಬೇಕಾದ ವ್ಯವಸ್ಥೆ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. VFS ಭಾರತದಲ್ಲಿ ಒಟ್ಟು ಒಂಬತ್ತು ಕಚೇರಿಗಳನ್ನು ಹೊಂದಿದೆ.
ವೀಸಾ ಪ್ರಕ್ರಿಯೆ ಪೂರ್ಣಗೊಳಿಸಲು ಮಹಿಳೆಯರು ಮತ್ತು ಮಕ್ಕಳು ವಿಎಫ್ ಎಸ್ ಕೇಂದ್ರಗಳಿಗೆ ತೆರಳಬೇಕು. ಟ್ರಾವೆಲ್ ಏಜೆನ್ಸಿ ಮೂಲಕ ಮುಂಬೈನಲ್ಲಿರುವ ಸೌದಿ ಕಾನ್ಸುಲೇಟ್ ಅಥವಾ ಹೊಸದಿಲ್ಲಿಯ ರಾಯಭಾರ ಕಚೇರಿಗೆ ಪಾಸ್‌ಪೋರ್ಟ್‌ನಲ್ಲಿ ವೀಸಾ ಸ್ಟಿಕ್ಕರ್ ಅಂಟಿಸುವ ಪರಿಪಾಠ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಇದನ್ನು ಕೆಲವು ದಿನಗಳ ಹಿಂದೆ ಪರಿಚಯಿಸಿದ A4 ಗಾತ್ರದ ಕಾಗದದಲ್ಲಿ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ವಿಸಾ ವಿಧಾನಕ್ಕೆ ಬದಲಾಯಿಸಲಾಗಿದೆ.
ಆದರೆ, ಪ್ರಯಾಣಿಕರಿಗೆ ಮತ್ತು ಯಾತ್ರಾ ಗ್ರೂಪುಗಳಿಗೆ ವೀಸಾ ಕಾರ್ಯವಿಧಾನಗಳ ಬಗ್ಗೆ ಅಸ್ಪಷ್ಟವಾಗಿತ್ತು. ವಿಎಫ್‌ಎಸ್‌ಗೆ ಹೋಗಿ ಬೆರಳಚ್ಚು ನೀಡುವ ಹೊಸ ವ್ಯವಸ್ಥೆ ಎಲ್ಲರಲ್ಲೂ ಗೊಂದಲವನ್ನು ಹೆಚ್ಚಿಸಿದೆ.
ಈ ಅವಶ್ಯಕತೆಯು, ರೆಸಿಡೆನ್ಸ್ ವಿಸಾ ಎಂಬ ನಿವಾಸ ವೀಸಾಕ್ಕೂ ಅನ್ವಯಿಸುತ್ತದೆಯೇ, ಹಿಂದಿನಂತೆ ಸ್ಥಳೀಯ ನೇಮಕಾತಿ ಕಚೇರಿಗಳಿಗೆ ವಕಾಲತ್ತು ನೀಡಬೇಕೇ ಮತ್ತು ಪ್ರಯಾಣಿಕರ ಆರೋಗ್ಯ ತಪಾಸಣೆ ವರದಿ ಮತ್ತು ಪಾಸ್‌ಪೋರ್ಟ್ ಅನ್ನು ಕಾನ್ಸುಲೇಟ್‌ಗೆ ಅಥವಾ ರಾಯಭಾರ ಕಚೇರಿಗೆ ಸಲ್ಲಿಸಬೇಕೇ ಎಂಬ ಗೊಂದಲವಿದೆ.
ಸೌದಿ ಅರೇಬಿಯಾಕ್ಕೆ ಎಲ್ಲಾ ರೀತಿಯ ವೀಸಾ ಕಾರ್ಯವಿಧಾನಗಳನ್ನು VFS ಮೂಲಕ ಮಾತ್ರ ಪೂರ್ಣಗೊಳಿಸುವುದಾದರೆ, ಶೀಘ್ರದಲ್ಲೇ ತಮ್ಮ ಕಚೇರಿಗಳನ್ನು ಹೆಚ್ಚಿನ ಸ್ಥಳಗಳಲ್ಲಿ ತೆರೆಯುವಂತೆ ಪ್ರಯಾಣಿಕರು ಮತ್ತು ಪ್ರಯಾಣ ವಲಯದಲ್ಲಿ ಕೆಲಸ ಮಾಡುವವರು ಆಶಿಸುತ್ತಿದ್ದಾರೆ. ಆದರೂ, ವಿಳಂಬ ಮತ್ತು ಶುಲ್ಕ ಹೆಚ್ಚಳವು ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವಿದೆ.