ದಾವಣಗೆರೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕರ್ನಾಟಕ ರಾಜ್ಯ ಮಟ್ಟದ ತರ್ತೀಲ್ ಖುರ್‌ಆನ್ ಸ್ಪರ್ಧೆ ದಾವಣಗೆರೆಯ ಯುನೈಟೆಡ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಖುರ್‌ಆನ್ ಪಾರಾಯಣ, ಹಿಫ್ಝ್ ಹಾಗೂ ಖುರ್‌ಆನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭೆಗಳು ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ಮೇ 27ರಂದು ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ತರ್ತೀಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಅಧ್ಯಕ್ಷತೆ ವಹಿಸಲಿದ್ದು ಮೌಲಾನಾ ಮುಖ್ತಾರ್ ಹಝ್ರತ್ ದಾವಣಗೆರೆ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆಎಂ ಮುಸ್ತಫಾ ನಈಮಿ ಹಾವೇರಿ, ರಾಜ್ಯ ಕಾರ್ಯದರ್ಶಿ ಕೆಕೆ ಅಶ್ರಫ್ ಸಖಾಫಿ ಹರಿಹರ, ಯಾಸೀನ್ ಸಖಾಫಿ, ಮೌಲಾನಾ ಹನೀಫ್ ರಝಾ ಖಾದ್ರಿ, ಸಯ್ಯದ್ ಸೈಫುಲ್ಲಾ ದಾವಣಗೆರೆ, ಯುನೈಟೆಡ್ ಇಂಟರ್‌ನ್ಯಾಷನಲ್ ಸ್ಕೂಲ್ ಚೇರ್ಮನ್ ಬಿ ದಾದಾಪೀರ್ ದಾವಣಗೆರೆ, ಸಿಎ ನಸೀರ್ ದಾವಣಗೆರೆ, ಅಬ್ದುನ್ನಾಸಿರ್ ಕೋಲಾರಿ, ಮೌಲಾನಾ ಸಿದ್ದೀಕ್ ಸಖಾಫಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.