ಚಿಕ್ಕಮಗಳೂರು :ಈ ಹಿಂದೆ ಬಿಜೆಪಿ ಸರ್ಕಾರ ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದು ಗೊಳಿಸಿ ಜಾರಿಗೊಳಿಸಿದ್ದ ಆದೇಶಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವು ತಡೆ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ತಿಳಿಸಿದ್ದಾರೆ.
ಅದಾಗಿ ಒಂದು ಸಮುದಾಯದ ಹಕ್ಕನ್ನು ಕಸಿದು ಬೇರೊಂದು ಸಮುದಾಯಕ್ಕೆ ನೀಡುವ ಅವೈಜ್ಞಾನಿಕ ಪ್ರಯತ್ನ ಮಾಡಿರುವುದು ಸರಿಯಲ್ಲ ಮುಸ್ಲಿಮರಿಗಿದ್ದ 4% ಮೀಸಲಾತಿಯನ್ನು ರದ್ದು ಗೊಳಿಸಿ ಲಿಂಗಾಯಿತ ಸಮುದಾಯಕ್ಕೆ ಮತ್ತು ಒಕ್ಕಲಿಗ ಸಮುದಾಯಕ್ಕೆ 2% ನೀಡಿರುವುದು ರಾಜಕೀಯ ಲಾಭಕ್ಕಾಗಿ ಬಳಸಿರುವುದು ಖಂಡನೀಯ ಆದ್ದರಿಂದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ನಾಯಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದ ರಜ್ವಿ ಮೀಸಲಾತಿಗೆ ಸಂಬಂಧಿಸಿದಂತೆ ದಿನಾಂಕ 9 ನೇ ಮೇ ರಂದು ವಿಚಾರಣೆ ಮುಂದೂಡಲಾಗಿದ್ದು ಭಾರತೀಯ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ ಸದರಿ ಪ್ರಕರಣದಲ್ಲಿ ಸಮುದಾಯಕ್ಕೆ ನ್ಯಾಯ ದೊರಕಲಿದೆ ಎಂದು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮೇಲೆ ಅಪಾರವಾದ ನಂಬಿಕೆ ಇದ್ದು ಮುಂದಿನ ದಿನಗಳಲ್ಲಿ ತೀರ್ಪು ಹೊರಬೀಳಲಿರುವುದರಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಹಾಗು ಪ್ರಜಾಪ್ರಭುತ್ವಕ್ಕೆ ವ್ಯವಸ್ಥೆಯಲ್ಲಿ ಅಸಮಾನತೆ ಪರಿಣಾಮ ಬೀರುವ ಸಾಧ್ಯತೆ ಇಲ್ಲವಂತಾಗಿ ಜಯ ಸಿಗಲಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ