ಮಕ್ಕಾ: ಉಮ್ರಾ ಕರ್ಮ ನಿರ್ವಹಿಸಲು ಮಂಗಳೂರಿನ ಅಲ್ ಸದೀಮ್ ಟೂರ್ಸ್ & ಟ್ರಾವೆಲ್ಸ್ ನಲ್ಲಿ ಮಕ್ಕಾ ತಲುಪಿದ ಉಡುಪಿ ಮೂಲದ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮಕ್ಕಾದಲ್ಲಿ ನಿಧನ ಹೊಂದಿದರು.
ಮೃತಪಟ್ಟ ಮಹಿಳೆಯರು ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ (66 ವ) ಹಾಗೂ ಅವರ ಅತ್ತೆಯ ಮಗಳು ಖತೀಜಮ್ಮ (68 ವ) ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಸಾಗಿಸುವಲ್ಲಿ ಹಾಗೂ ಇಬ್ಬರ ದಫನ ಕಾರ್ಯಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳು, ಎಲ್ಲಾ ಅವಶ್ಯ ದಾಖಲೆಗಳನ್ನು ಸರಿಪಡಿಸಿ ಸಹಕರಿಸುವಲ್ಲಿ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರು ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮಾ ಸೆಕ್ಟರ್ ನೇತಾರರಾದ ಮೂಸಾ ಹಾಜಿ ಕಿನ್ಯ ಹಾಗೂ ಕೆಸಿಎಫ್ ಮದೀನತುಲ್ ಮುನವ್ವರ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ಅಬ್ದುಲ್ ರಝ್ಝಾಖ್ ಉಳ್ಳಾಲರವರು ಪ್ರಮುಖ ಪಾತ್ರ ವಹಿಸಿದ್ದರು.
ಹೀಗೆ ಹಲವು ವರ್ಷಗಳಿಂದ ಪುಣ್ಯ ಭೂಮಿಗಳಾದ ಮಕ್ಕಾ ಮತ್ತು ಮದೀನಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಇದರ ಕಾರ್ಯಕರ್ತರು ಇಂತಹ ಮರಣ ಪ್ರಕ್ರಿಯೆಗಳಲ್ಲಿ ಮರಣ ಹೊಂದಿದ ಸಂಬಂಧಿಕರು ಹಾಗೂ ಉಮ್ರಾ ಟ್ರಾವೆಲ್ಸ್ ನವರೊಂದಿಗೆ ಕೈ ಜೋಡಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.